ಯೂಟ್ಯೂಬ್ ವಿಡಿಯೋ ನೋಡಿಕೊಂಡು ಸ್ವಯಂ ಹೆರಿಗೆ ಮಾಡಿಕೊಂಡ ಬಾಲಕಿ! - Mahanayaka
9:19 AM Wednesday 20 - August 2025

ಯೂಟ್ಯೂಬ್ ವಿಡಿಯೋ ನೋಡಿಕೊಂಡು ಸ್ವಯಂ ಹೆರಿಗೆ ಮಾಡಿಕೊಂಡ ಬಾಲಕಿ!

kerala news
28/10/2021


Provided by

ಮಲಪ್ಪುರಂ:  17 ವರ್ಷ ವಯಸ್ಸಿನ ಬಾಲಕಿಯೋರ್ವಳು ಯೂಟ್ಯೂಬ್ ವಿಡಿಯೋ ನೋಡಿ ಸ್ವಯಂ ಹೆರಿಗೆ ಮಾಡಿಕೊಂಡ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಬಾಲಕಿ ಗರ್ಭಿಣಿಯಾಗಲು ಕಾರಣನಾದ 21 ವರ್ಷ ವಯಸ್ಸಿನ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಅಕ್ಟೋಬರ್ 20ರಂದು ಹುಡುಗಿ ಮಗುವಿಗೆ ಜನ್ಮ ನೀಡಿದ್ದು, ಯೂಟ್ಯೂಬ್ ವಿಡಿಯೋಗಳನ್ನು ನೋಡಿಕೊಂಡು ಸ್ವಯಂ ಹೆರಿಗೆ ಮಾಡಿಸಿಕೊಂಡಿದ್ದಾಳೆ. ಹೆರಿಗೆಗೆ ಹುಡುಗಿ ಹೊರಗಿಯ ಯಾರ ಸಹಾಯವನ್ನು ಕೂಡ ಪಡೆದುಕೊಂಡಿಲ್ಲ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಸದ್ಯ ಮಂಜೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಾಯಿ ಹಾಗೂ ಮಗುವನ್ನು ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಬಾಲಕಿ ಗರ್ಭಿಣಿಯಾಗಲು ಕಾರಣನಾಗಿದ್ದ 21 ವರ್ಷ ವಯಸ್ಸಿನ ಯುವಕನನ್ನು ಪೊಲೀಸರು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ತ ಬಾಲಕಿಯ ತಾಯಿ ದೃಷ್ಟಿ ಹೀನರಾಗಿದ್ದು, ತಂದೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ತಂದೆ ರಾತ್ರಿ ಕರ್ತವ್ಯದಲ್ಲಿರುತ್ತಿದ್ದರು. ಬಾಲಕಿ ತನ್ನ ಮೊಬೈಲ್ ನೊಂದಿಗೆ ಕೋಣೆಯಲ್ಲಿಯೇ ಇರುತ್ತಿದ್ದಳು. ಆಕೆ ಆನ್ ಲೈನ್ ಕ್ಲಾಸ್ ನಲ್ಲಿದ್ದಾಳೆ ಎಂದು ತಾಯಿ ಭಾವಿಸಿದ್ದರು ಎನ್ನಲಾಗಿದೆ. ಅ.22ರಂದು ಮಗು ಅಳುವ ಶಬ್ಧ ಕೇಳಿದಾಗ ಪೋಷಕರಿಗೆ ವಿಚಾರ ತಿಳಿದು ಬಂದಿದೆ ಎಂದು  ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ