ಕಮಲ ಪಾಳಯಕ್ಕೆ ತಲೆನೋವಾದ ಯೂಟ್ಯೂಬರ್: ಧ್ರುವ್ ರಾಠಿ ಮುಸ್ಲಿಂ ಎಂದು ಸಂಘ ಪರಿವಾರ ಮತ್ತು ಐಟಿಸೆಲ್ ನಿಂದ ಸುಳ್ಳು ಸಂದೇಶ - Mahanayaka

ಕಮಲ ಪಾಳಯಕ್ಕೆ ತಲೆನೋವಾದ ಯೂಟ್ಯೂಬರ್: ಧ್ರುವ್ ರಾಠಿ ಮುಸ್ಲಿಂ ಎಂದು ಸಂಘ ಪರಿವಾರ ಮತ್ತು ಐಟಿಸೆಲ್ ನಿಂದ ಸುಳ್ಳು ಸಂದೇಶ

01/05/2024


Provided by

ಪ್ರಧಾನ ಮಂತ್ರಿ ಮೋದಿ ಸರ್ಕಾರದ ಸುಳ್ಳು ಮತ್ತು ಅಸಮರ್ಪಕ ಆಡಳಿತ ನೀತಿಯನ್ನು ಇಂಚಿಂಚಾಗಿ ಬಯಲಿಗೆ ತರುತ್ತಿರುವ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ ಸಂಘ ಪರಿವಾರ ಮತ್ತು ಐಟಿಸೆಲ್ ಅತ್ಯಂತ ಆಘಾತಕಾರಿ ಮತ್ತು ಅತ್ಯಂತ ಅಸಹ್ಯವಾದ ಸುಳ್ಳುಗಳನ್ನು ವಾಟ್ಸಾಪ್ ಮೂಲಕ ಹರಿಸುತ್ತಿರುವುದು ಬಹಿರಂಗವಾಗಿದೆ. ಧ್ರುವ್ ರಾಠಿಯ ನಿಜವಾದ ಹೆಸರು ಬದ್ರುದ್ದೀನ್ ರಶೀದ್ ಲಾಹೋರಿ ಎಂದಾಗಿದ್ದು ಇವರು ಪಾಕಿಸ್ತಾನದ ಲಾಹೋರಿನವರಾಗಿದ್ದಾರೆ ಎಂಬುದು ಈ ಸುಳ್ಳುಗಳಲ್ಲಿ ಒಂದು.

ಇವರ ಪತ್ನಿ ಕೂಡ ಪಾಕಿಸ್ತಾನದವರಾಗಿದ್ದು ಅವರ ನಿಜವಾದ ಹೆಸರು ಜುಲೈಕ ಎಂದಾಗಿದೆ ಎಂದು ವಾಟ್ಸಾಪ್ ನಲ್ಲಿ ಸಂದೇಶವನ್ನು ಹರಡಲಾಗುತ್ತಿದೆ. ಕರಾಚಿಯಲ್ಲಿರುವ ಭೂಗತ ದೊರೆ ದಾವೂದ್ ಇಬ್ರಾಹಿಂನ ಬಂಗಲೆಯಲ್ಲಿ ರಾಠಿ ವಾಸಿಸುತ್ತಿದ್ದಾರೆ ಎಂದು ಕೂಡ ವಾಟ್ಸಪ್ ಮೂಲಕ ಸುಳ್ಳು ಸುದ್ದಿಯನ್ನು ಹಂಚಲಾಗುತ್ತಿದೆ. ರಾಠಿಯವರ ಪತ್ನಿಯ ತಂದೆ ಪಾಕಿಸ್ತಾನಿ ಎಂದು ಕೂಡ ವಾಟ್ಸಪ್ ಸಂದೇಶದಲ್ಲಿ ಹೇಳಲಾಗಿದೆ.

ಈ ಆರೋಪಕ್ಕೆ ಧೃವರಾಠಿ ಉತ್ತರ ನೀಡಿದ್ದಾರೆ. ನನ್ನ ಪತ್ನಿ ಪಾಕಿಸ್ತಾನಿ ಎಂದು ಹೇಳಲಾಗುತ್ತಿದೆ. ಆದರೆ ಇದು ಸುಳ್ಳು. ನನ್ನ ಪತ್ನಿ ಜರ್ಮನಿಯವಳು. ಉಳಿದ ಎಲ್ಲಾ ಸಂದೇಶ ಕೂಡ ಸುಳ್ಳು ಎಂದು ಅವರು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಈ ಸುಳ್ಳು ಪ್ರಚಾರಕ್ಕೆ ಅವರು ಎಕ್ಸ್ ತಾಣದ ಮೂಲಕ ಕೂಡ ಉತ್ತರ ನೀಡಿದ್ದಾರೆ. ತಾನು ವಿಡಿಯೋದಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ, ಆದ್ದರಿಂದ ಈ ಸುಳ್ಳು ಪ್ರಚಾರಕ್ಕೆ ಇಳಿದಿದ್ದಾರೆ ಎಂದು ರಾಠಿ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ