ಯುದ್ಧ ಪೀಡಿತ ಉಕ್ರೇನ್‌ ನಿಂದ 1,000ಕಿ.ಮೀ. ದೂರ ಒಬ್ಬನೇ ಪ್ರಯಾಣಿಸಿದ ಬಾಲಕ - Mahanayaka
11:14 AM Saturday 23 - August 2025

ಯುದ್ಧ ಪೀಡಿತ ಉಕ್ರೇನ್‌ ನಿಂದ 1,000ಕಿ.ಮೀ. ದೂರ ಒಬ್ಬನೇ ಪ್ರಯಾಣಿಸಿದ ಬಾಲಕ

balaka
07/03/2022


Provided by

ಕೀವ್‌: ಉಕ್ರೇನ್‌ ನ ಮೇಲಿನ ರಷ್ಯಾದ ಆಕ್ರಮಣ ನಡುವೆ 11 ವರ್ಷದ ಉಕ್ರೇನ್‌ ಬಾಲಕನೊಬ್ಬ ಬ್ಯಾಕ್‌ಪ್ಯಾಕ್‌ ಹಿಡಿದು, ತನ್ನ ತಾಯಿ ಕೊಟ್ಟಿದ್ದ ಸಂದೇಶ ಮತ್ತು ಟೆಲಿಫೋನ್‌ ಸಂಖ್ಯೆಯನ್ನು ಬರೆದುಕೊಂಡು 1,000ಕಿ.ಮೀ. ಒಬ್ಬನೇ ಪ್ರಯಾಣಿಸಿ ಸ್ಲೊವಾಕಿಯಾ ತಲುಪಿರುವ ಬಗ್ಗೆ ವರದಿಯಾಗಿದೆ.

ಎನ್‌ಡಿಟಿವಿ ವರದಿ ಪ್ರಕಾರ, ರಷ್ಯಾ ಪಡೆಗಳು ಕಳೆದ ವಾರ ವಶಪಡಿಸಿಕೊಂಡ ವಿದ್ಯುತ್‌ ಸ್ಥಾವರವಿರುವ ಆಗ್ನೇಯ ಉಕ್ರೇನ್‌ನ ಝಪೊರಿಝಿಯಾದಿಂದ ಬಾಲಕ ಬಂದಿದ್ದಾನೆ. ವರದಿಗಳ ಪ್ರಕಾರ, ಅನಾರೋಗ್ಯ ಪೀಡಿತ ಸಂಬಂಧಿಯೊಬ್ಬರನ್ನು ನೋಡಿಕೊಳ್ಳಲು ಆತನ ಪೋಷಕರು ಉಕ್ರೇನ್‌ನಲ್ಲಿಯೇ ಉಳಿಯಬೇಕಾಯಿತು ಎಂದು ತಿಳಿಸಿದೆ.

ಬಹುದೂರದ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ ಬಾಲಕ ನಗು, ನಿರ್ಭಯತೆ ಮತ್ತು ದೃಢ ನಿಶ್ಚಯ ಹೊಂದಿರುವ ಈತ ನಿಜವಾದ ನಾಯಕ ಎಂಬುವುದನ್ನು ತೋರಿಸುತ್ತದೆ ಎಂದು ಅಧಿಕಾರಿಗಳೇ ಆತನಿಗೆ ಮನಸೋತಿರುವುದಾಗಿ ಸ್ಲೋವಾಕಿಯಾ ಆಂತರಿಕ ಸಚಿವಾಲಯ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ಸಂಬಂಧಿಕರನ್ನು ಹುಡುಕಲು ಆತನನ್ನು ರೈಲಿನಲ್ಲಿ ಸ್ಲೋವಾಕಿಯಾಕ್ಕೆ ಕಳುಹಿಸಲಾಗಿತ್ತು. ಆತನ ಬಳಿ ಪ್ಲಾಸ್ಟಿಕ್‌ ಚೀಲ, ಪಾಸ್‌ಪೋರ್ಟ್‌ ಮತ್ತು ಸಂದೇಶವೊಂದು ಇತ್ತು ಎಂದು ಆತನ ತಾಯಿ ತಿಳಿಸಿದ್ದಾರೆ ಎಂದು ವರದಿಗಳು ಹೇಳಿದೆ.

ಬಾಲಕ ಸ್ಲೋವಾಕಿಯಾಕ್ಕೆ ಬಂದಗ ಆತನ ಕೈಯಲ್ಲಿ ಫೋನ್‌ ನಂಬರ್‌,‌ ಪಾಸ್‌ಪೋರ್ಟ್‌ ಮತ್ತು ಮಡಚಿಟ್ಟಿದ್ದ ಕಾಗದದ ತುಂಡು ಇತ್ತು ಇದರಿಂದಾಗಿ ಗಡಿಯಲ್ಲಿದ್ದ ಅಧಿಕಾರಿಗಳು, ರಾಜಧಾನಿ ಬ್ರಾಟಿಸ್ಲಾವಾದಲ್ಲಿರುವ ಆತನ ಸಂಬಂಧಿಕರನ್ನು ಸಂಪರ್ಕಿಸಿ, ಬಳಿಕ ಅತನನ್ನು ಅವರಿಗೆ ಒಪ್ಪಿಸಿದ್ದಾರೆ.

ಬಾಲಕನ ತಾಯಿ ಸ್ಲೋವಾಕಿಯಾ ಸರ್ಕಾರ ಮತ್ತು ಆತನ ಬಗ್ಗೆ ಕಾಳಜಿ ವಹಿಸಿದ ಪೊಲೀಸರಿಗೆ ಧನ್ಯವಾದ ಸಲ್ಲಿಸಲು ಸಂದೇಶ ಕಳುಹಿಸಿದ್ದಾರೆ ಎಂದು ವರದಿ ತಿಳಿಸಿದೆ.
ಬಾಲಕನ ಬಳಿಯಲ್ಲಿ ಫೋನ್‌ ನಂಬರ್‌ ಮತ್ತು ಕಾಗದದಲ್ಲಿ ಸಂದೇಶಕ್ಕೆ ಧನ್ಯವಾದಗಳು. ಇದರಿಂದಾಗಿಯೇ ನಾವು ಆತನ ಸಂಬಂಧಿಕರನ್ನು ಸಂಪರ್ಕಿಸಲು ಸಾಧ್ಯವಯಿತು ಎಂದು ಸಚಿವಾಲಯ ಮಾಹಿತಿ ನೀಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನೊಟೀಸ್ ನೀಡದೆ ಕೃಷಿ ಭೂಮಿ ತೆರವು: ಅರಣ್ಯಾಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ಅತ್ಯಾಚಾರ ಆರೋಪ: ಕೇರಳದ ಸಿನಿಮಾ ನಿರ್ದೇಶಕ ಲಿಜು ಕೃಷ್ಣ ಬಂಧನ

ಎಂಜಿನ್ ಕೆಟ್ಟಿರುವ ಡಬ್ಬಾ ಸರ್ಕಾರ: ಸಿದ್ದರಾಮಯ್ಯ

ರಷ್ಯಾದ ಎರಡು ಯುದ್ಧ ವಿಮಾನ ಹೊಡೆದುರುಳಿಸಿದ ಉಕ್ರೇನ್: ಓರ್ವ ಪೈಲಟ್ ಸಾವು

ವ್ಲಾಡಿಮಿರ್‌ ಪುಟಿನ್‌ ತೆಗೆದುಕೊಳ್ಳುವ ಮುಂದಿನ ನಿರ್ಧಾರವೇನು? | ಯುದ್ಧ ಮತ್ತೆ ಆರಂಭವಾಗುತ್ತಾ?

 

ಇತ್ತೀಚಿನ ಸುದ್ದಿ