ರಸ್ತೆಯಲ್ಲಿ ಬಾಳೆ ಗಿಡ ನೆಟ್ಟ ಬೆನ್ನಲ್ಲೇ ಗುಂಡಿ ಮುಚ್ಚಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ - Mahanayaka

ರಸ್ತೆಯಲ್ಲಿ ಬಾಳೆ ಗಿಡ ನೆಟ್ಟ ಬೆನ್ನಲ್ಲೇ ಗುಂಡಿ ಮುಚ್ಚಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

road problem
22/07/2022


Provided by

ಬೆಳ್ತಂಗಡಿ;  ಗುಂಡಿ ಮುಚ್ಚಿ ಜನರ ಜೀವ ಉಳಿಸಿ ಎಂದು ಒತ್ತಾಯಿಸಿ ಬುಧವಾರ ಯುವ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯ ಬಳಿಕ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ  ಲಾಯಿಲ ಜಂಕ್ಷನ್ ನಿಂದ ಗುರುವಾಯನಕೆರೆ ತನಕ ರಾಷ್ಟ್ರೀಯ ಹೆದ್ದಾರಿ ಗುಂಡಿಗಳನ್ನು ಮುಚ್ಚುವ ಕಾರ್ಯ ನಿರ್ವಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಹೆಚ್.ಪೈ, ಜನರ ಜೀವ ಉಳಿಸುವ ನಿಟ್ಟಿನಲ್ಲಿ ನಮ್ಮ ಪಕ್ಷದ ವತಿಯಿಂದ ನಡೆದ ಪ್ರತಿಭಟನೆ ಫಲಭರಿತವಾಗಿದೆ. ತಾಲೂಕಿನ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಪರಿಸ್ಥಿತಿ ಗುಂಡಿಯಲ್ಲಿ ರಸ್ತೆಯೋ , ರಸ್ತೆಯಲ್ಲಿ ಗುಂಡಿಯೋ ಎಂಬಾತಬಾಗಿದೆ. ಇದರಿಂದಾಗಿ ಹಲವಾರು ಅಪಘಾತಗಳು ಸಂಭವಿಸಿ ಕೈಕಾಲು ಮುರಿದು ಜೀವಹಾನಿಯಾಗಿತ್ತು. ಇದೀಗ ನಮ್ಮ ಹೋರಾಟಕ್ಕೆ ಮಣಿದು ಆಡಳಿತ ವ್ಯವಸ್ಥೆ ರಸ್ತೆಯ ಗುಂಡಿ ಮುಚ್ಚುವ ತುರ್ತು ಕಾರ್ಯ ಮಾಡಿದ್ದಾರೆ ಎಂದರು.

ಇದು ನಮ್ಮ ಹೋರಾಟಕ್ಕೆ ಸಿಕ್ಕಿದ ಜಯ. ಬಿಸಿಯಾಗದೆ ಬೆಣ್ಣೆ ಕರಗದು ಎಂಬಂತೆ ರಸ್ತೆ ಗುಂಡಿ ಮುಚ್ಚಲು ನಮ್ಮ ಪ್ರತಿಭಟನೆ ಕಾರಣವಾಗಿದೆ.. ಕೇವಲ ತಾತ್ಕಾಲಿಕವಾಗಿ ಗುಂಡಿ ಮುಚ್ಚಿದರೆ ಸಾಲದು , ಮಳೆಗಾಲ ಮುಗಿದ ನಂತರ ಮರುಡಾಮರೀಕರಣಕ್ಕೆ ಒತ್ತಾಯಿಸಿ ತಾಲೂಕಿನಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ. ನಮ್ಮ ಹೋರಾಟದಲ್ಲಿ ಕೈಜೋಡಿಸಿದ ಸರ್ವರಿಗೂ ಅಭಿನಂದನೆಗಳು ಎಂದು ಅನಿಲ್ ಹೆಚ್. ಪೈ. ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ