ಯುವ ಜೋಡಿಯ ಕನಸು ಮಾತ್ರವಲ್ಲ, ಪ್ರಾಣವನ್ನೂ ಹೀರಿದ ದುಷ್ಟ ಜಾತಿ! - Mahanayaka
2:09 PM Tuesday 16 - September 2025

ಯುವ ಜೋಡಿಯ ಕನಸು ಮಾತ್ರವಲ್ಲ, ಪ್ರಾಣವನ್ನೂ ಹೀರಿದ ದುಷ್ಟ ಜಾತಿ!

love
24/03/2021

ವಿಜಯವಾಡ: ಮನುವಾದಿಗಳ ಸ್ವಾರ್ಥಕ್ಕಾಗಿ ಸೃಷ್ಟಿಸಲಾಗಿರುವ ಜಾತಿ ವ್ಯವಸ್ಥೆಗೆ ಎಷ್ಟೋ ಜನ ಪ್ರೇಮಿಗಳು ಬಲಿಯಾಗಿದ್ದಾರೆ. ಬೇರೆ ಬೇರೆ ಜಾತಿ ಎನ್ನುವ ಕಾರಣಕ್ಕಾಗಿ ಎಷ್ಟೋ ಪ್ರೇಮಿಗಳು ಬೇರ್ಪಟ್ಟಿದ್ದಾರೆ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ ಅಂತಹದ್ದೇ ಮತ್ತೊಂದು ಘಟನೆ ಆಂಧ್ರಪ್ರದೇಶದ ಒಂಗೋಲ್ ಉಪನಗರದಲ್ಲಿ ನಡೆದಿದೆ.


Provided by

ಪೆಲ್ಲೂರ್ ಸಮೀಪದ ರೈಲ್ವೆ ಹಳೆಯ ಮೇಲೆ ಯುವಕ ಮತ್ತು ಯುವತಿಯ ಮೃತದೇಹ ಮಂಗಳವಾರ ಪತ್ತೆಯಾದ ಬಳಿಕ ಈ ಘೋರ ಘಟನೆ ಬೆಳಕಿಗೆ ಬಂದಿದೆ. ಒಂಗೋಲ್ ಉಪನಗರದ ಕೊಪ್ಪಳ್ ಮೂಲದ ವೆಂಕಟೇಶ್ವರ್ ರೆಡ್ಡಿ ಮತ್ತು ಸುಜಾತ ದಂಪತಿಯ ಮಗ ವಿಷ್ಣುವರ್ಧನ್ ರೆಡ್ಡಿ ಹಾಗೂ ಒಂಗೋಲ್ ವೆಂಕಟೇಶ್ವರ ಕಾಲನಿಯ ಇಂದು ಎಂಬ ಯುವತಿ ಫೇಸ್ ಬುಕ್ ಮೂಲಕ ಪರಸ್ಪರ ಪರಿಚಯವಾಗಿದ್ದರು.

ಇಂದುವಿನ ತಂದೆ ಒಂದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಆಕೆಯ ತಾಯಿ ಹಾಗೂ ಸಹೋದರ ಆಕೆಯನ್ನು ನೋಡಿಕೊಳ್ಳುತ್ತಿದ್ದರು. ಫೇಸ್ ಬುಕ್ ನಲ್ಲಿ ವಿಷ್ಣು ಪರಿಚಯವಾದ ಬಳಿಕ ಇಂದು ಹಾಗೂ ವಿಷ್ಣು ಪರಸ್ಪರ ಪ್ರೀತಿಸಲು ಆರಂಭಿಸಿದರು.

ಈ ನಡುವೆ ಇಂದು ಹಾಗೂ ವಿಷ್ಣು ಫೋನ್ ನಲ್ಲಿ ನಿರಂತರವಾಗಿ ಯುವತಿಯ ಜೊತೆಗೆ ಫೋನ್ ನಲ್ಲಿ ಮಾತನಾಡುತ್ತಿರುವುದನ್ನು ವಿಷ್ಣುವಿನ ತಾಯಿ ಗಮನಿಸಿದ್ದು,  ಮಗನ ಪ್ರೀತಿ ವಿಚಾರ ತಿಳಿಯುತ್ತಿದ್ದಂತೆಯೇ ಮೊಬೈಲ್ ಒಡೆದು ಹಾಕಿ ಮಗನಿಗೆ ಬುದ್ಧಿ ಹೇಳಿದ್ದಾರೆ. ಜೊತೆಗೆ ಯುವತಿಯ ಜಾತಿ ಮತ್ತು ನಿನ್ನ ಜಾತಿ ಬೇರೆ ಬೇರೆ ಎಂದೂ ವಿಷ್ಣುವಿನ ಮನಸ್ಸನ್ನೂ ನೋಯಿಸಿದ್ದಾರೆ.

ಈ ಘಟನೆಯ ಬಳಿಕ ಇಂದು ಹಾಗೂ ವಿಷ್ಣು ಇಬ್ಬರು ಕೂಡ ನಾಪತ್ತೆಯಾಗಿದ್ದಾರೆ.  ಈ ಬಗ್ಗೆ ಎರಡೂ ಕುಟುಂಬಗಳು ದೂರು ನೀಡಿದ್ದವು. ಮಂಗಳವಾರ ಬೆಳಗ್ಗೆ 10 ಗಂಟೆಗೆ ಯುವ ಜೋಡಿ ರೈಲು ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದೆ ಎಂಬ ಮಾಹಿತಿ ಸುರಾರೆಡ್ಡಿಪಾಳ್ಯಂ ಪೊಲೀಸರಿಗೆ ತಿಳಿದು ಬಂದಿದೆ.

ಪೊಲೀಸರು ಘಟನೆ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಇಂದು ಹಾಗೂ ವಿಷ್ಣುವಿನ ಪ್ರೇಮ ಕಥೆ ಬಯಲಾಗಿತ್ತು. ಮನುವಾದಿಗಳ ಸೃಷ್ಟಿಯ ಜಾತಿ ವ್ಯವಸ್ಥೆಗೆ ಮತ್ತೆ ಎರಡು ಜೀವ ಬಲಿಯಾಗಿತ್ತು. ಇದು ನೋಡಲು ಆತ್ಮಹತ್ಯೆಯಂತೆ ಕಂಡರೂ, ಮಾನಸಿಕವಾಗಿ ಹಿಂಸೆ ನೀಡಿ ಮಾಡಿದ ಬರ್ಬರ ಹತ್ಯೆ ಅಲ್ಲದೆ ಮತ್ತೇನು ಅಲ್ಲವೇ? ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಸಿಕ್ಕಿರುವುದು ಕೂಡ ಇದೇ ಮಾಹಿತಿಯಾಗಿದೆ. ಅಂತರ್ಜಾತಿಯ ವಿವಾಹಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಇವರಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಇಲ್ಲಿಗೆ ನಿಲ್ಲುವುದಿಲ್ಲ. ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಜಾತಿ ಸಾಯುವವರೆಗೂ ಪ್ರೀತಿ ಬದುಕಲು ಸಾಧ್ಯವಿಲ್ಲ.

ಇದನ್ನೂ ಓದಿ:

ತನ್ನ ಸ್ವಂತ ತಂದೆಗೆ ಮದ್ಯ ಕುಡಿಸಿ ನೀಚ ಕೃತ್ಯ ನಡೆಸಿದ ಯುವತಿ! | ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆ

ಇತ್ತೀಚಿನ ಸುದ್ದಿ