ತಡರಾತ್ರಿ ಯುವಕ, ಯುವತಿಯರಿಂದ ರೇವ್ ಪಾರ್ಟಿ: ದೊಡ್ಡವರ ಮಕ್ಕಳು ಅರೆಸ್ಟ್ - Mahanayaka
11:12 PM Wednesday 20 - August 2025

ತಡರಾತ್ರಿ ಯುವಕ, ಯುವತಿಯರಿಂದ ರೇವ್ ಪಾರ್ಟಿ: ದೊಡ್ಡವರ ಮಕ್ಕಳು ಅರೆಸ್ಟ್

party
11/04/2021


Provided by

ಹಾಸನ: ರೇವ್ ಪಾರ್ಟಿಗೆ ದಾಳಿ ನಡೆಸಿರುವ ಪೊಲೀಸರು ನೂರಕ್ಕೂ ಹೆಚ್ಚು ಯುವಕರು, ಯುವತಿಯರನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೊಂಕರವಳ್ಳಿಯಲ್ಲಿ ನಡೆದಿದೆ.

 

ಶನಿವಾರ ರಾತ್ರಿ ಹೊಂಕರವಳ್ಳಿ ಸಮೀಪದ ನಂದೀಶ್ವರ ಎಸ್ಟೇಟ್ ನಲ್ಲಿ ಪಾರ್ಟಿ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿಯ ವೇಳೆ ಶ್ರೀಮಂತರ ಮಕ್ಕಳ ಐಶಾರಾಮಿ ಕಾರುಗಳು, ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 

ಬೆಂಗಳೂರಿನಿಂದ ಬಂದಿದ್ದ ಯುವಕರು, ಯುವತಿಯರು ಪಾರ್ಟಿಯಲ್ಲಿ ತೊಡಗಿದ್ದರು. ಮಾದಕ ವಸ್ತುಗಳನ್ನು ಬಳಸುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ

ಇತ್ತೀಚಿನ ಸುದ್ದಿ