ಯುವಕನ ಬರ್ಬರ ಹತ್ಯೆ: 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಅರೆಸ್ಟ್! - Mahanayaka

ಯುವಕನ ಬರ್ಬರ ಹತ್ಯೆ: 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಅರೆಸ್ಟ್!

arrest
22/12/2021


Provided by

ಚೆನ್ನೈ: ಯುವಕನೋರ್ವನ ಹತ್ಯೆಗೆ ಸಂಬಂಧಿಸಿದಂತೆ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದ್ದು, ಹತ್ಯೆಗೀಡಾಗಿರುವ ಯುವಕ ಬಾಲಕಿಯರ ಖಾಸಗಿ ಫೋಟೋ ಇಟ್ಟು ಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಈಚಿಂಗಾಡು ಗ್ರಾಮದಲ್ಲಿ ವ್ಯಕ್ತಿಯೋರ್ವನ ರಕ್ತ ಸಿಕ್ತ ಹಲ್ಲು ಮತ್ತು ಕೂದಲು ಇರುವ ಬಗ್ಗೆ  ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಪೊಲೀಸರಿಗೆ ಸಂತ್ರಸ್ತನ ಮೊಬೈಲ್ ಫೋನ್ ಸಿಕ್ಕಿದ್ದು, ಈ ಮೊಬೈಲ್ ಫೋನ್ ನಲ್ಲಿ  ಚೆಂಗಾಲಪಟ್ಟ ಜಿಲ್ಲೆಯ 10ನೇ ತರಗತಿಯ ವಿದ್ಯಾರ್ಥಿನಿಯರ ಸುಳಿವು ಲಭ್ಯವಾಗಿದೆ.

ಬಾಲಕಿಯರನ್ನು ವಿಚಾರಣೆ ನಡೆಸಿದಾಗ, ಪ್ರೇಮ್ ಕುಮಾರ್ ಎಂಬಾತ ಬಾಲಕಿಯರಿಬ್ಬರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಇದರಿಂದ ಬೇಸತ್ತು ಹೋಗಿ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಿತನಾಗಿದ್ದ ಅಶೋಕ್ ಎಂಬಾತನ ಸಹಾಯ ಕೇಳಿದ್ದರು ಮತ್ತು ತಾವು ಅನುಭವಿಸುತ್ತಿರುವ ತೊಂದರೆಯನ್ನು ತಿಳಿಸಿದ್ದಾರೆ.

ಈ ವೇಳೆ ಅಶೋಕ್, ಪ್ರೇಮ್ ಕುಮಾರ್ ನನ್ನು ಶೋಲವರಮ್ ಟೋಲ್ ಫ್ಲಾಜಾ ಬಳಿ ಕರೆಯುವಂತೆ ಬಾಲಕಿಯರಿಗೆ ತಿಳಿಸಿದ್ದಾನೆ. ಅಲ್ಲಿ ಬಂದಾಗ ಆತನನ್ನು ಅಪಹರಿಸಿದ್ದಾರೆ. ಪ್ರೇಮ್ ಕುಮಾರ್ ನನ್ನು ಅಪಹರಿಸಿ ಆತನ ಮೊಬೈಲ್ ಕಸಿದು ಅದರಿಂದ ತಮ್ಮ ಚಿತ್ರವನ್ನು ಡಿಲೀಟ್ ಮಾಡುವಂತೆ ಬಾಲಕಿಯರು ಬೇಡಿಕೆ ಇಟ್ಟಿದ್ದರು ಆದರೆ, ಅಶೋಕ್ ಮತ್ತು ಆತನ ಸ್ನೇಹಿತರು ಪ್ರೇಮ್ ಕುಮಾರ್ ನನ್ನು ಅಪಹರಿಸಿ ಚಿತ್ರ ಹಿಂಸೆ ನೀಡಿ ಈಚಂಗಾಡು ಗ್ರಾಮದಲ್ಲಿ ಬರ್ಬರವಾಗಿ ಹತ್ಯೆ ನಡೆಸಿ, ಅಲ್ಲಿಯೇ ಸಮಾಧಿ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಿಮ್ಮ ಅಪ್ಪನ ಕಾಲದಲ್ಲಿ ಅತೀ ದೊಡ್ಡ ಗುಂಪು ಹತ್ಯೆ ನಡೆದಿತ್ತು: ರಾಹುಲ್ ಗಾಂಧಿಗೆ ಬಿಜೆಪಿ ನಾಯಕರ ತಿರುಗೇಟು

ಚಿಕ್ಕಬಳ್ಳಾಪುರ: ಕಂಪಿಸಿದ ಭೂಮಿ, ಮನೆಯಿಂದ ಹೊರಗೆ ಓಡಿ ಬಂದ ಜನರು

“ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ…” | ಅಪ್ಪುವನ್ನು ನೆನೆದು ವಿಶೇಷ ಪೋಸ್ಟ್ ಮಾಡಿದ ನಟಿ ರಮ್ಯಾ

ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ನಿರ್ಬಂಧ ಇದೆಯೇ? | ಸಿಎಂ ಬೊಮ್ಮಾಯಿ ಹೇಳಿದ್ದೇನು?

ಪಟಾಕಿ ಒಂದು ಸಂಸ್ಕೃತಿ, ನಾನು ಕೇಡಿ ರವಿ ಅಲ್ಲ: ಡಿಕೆಶಿಗೆ ಸಿ.ಟಿ.ರವಿ ತಿರುಗೇಟು

ಎಂಇಎಸ್‌ ಖ್ಯಾತೆ: ಸಿದ್ದರಾಮಯ್ಯ, ಡಿಕೆಶಿ ಅವರಿಂದ ದ್ವಂದ್ವ ಹೇಳಿಕೆ; ಸಚಿವ ಈಶ್ವರಪ್ಪ ಆರೋಪ

ಇತ್ತೀಚಿನ ಸುದ್ದಿ