ಯುವಕನ ಕೆಲಸಕ್ಕೆ ಬತ್ತಿ ಇಟ್ಟ ತಿರುಪತಿ ತಿಮ್ಮಪ್ಪ | ಅಷ್ಟಕ್ಕೂ ನಡೆದದ್ದೇನು ಗೊತ್ತಾ? - Mahanayaka

ಯುವಕನ ಕೆಲಸಕ್ಕೆ ಬತ್ತಿ ಇಟ್ಟ ತಿರುಪತಿ ತಿಮ್ಮಪ್ಪ | ಅಷ್ಟಕ್ಕೂ ನಡೆದದ್ದೇನು ಗೊತ್ತಾ?

ubar shreekanth
04/04/2021


Provided by

ಹೈದರಾಬಾದ್: ತಿರುಪತಿಗೆ ಹೋಗಿ ತಲೆಬೋಳಿಸಿ ಕೊಂಡರೆ ಒಳ್ಳೆಯದಾಗುತ್ತದೆ ಎಂದು ನಂಬಿ ಊಬರ್ ಕ್ಯಾಬ್ ಚಾಲಕನೋರ್ವ ತನ್ನ ತಲೆ ಬೋಳಿಸಿಕೊಂಡಿದ್ದು, ಮರುದಿನ ತನ್ನ ಕೆಲಸಕ್ಕೆ ಜಾಯಿನ್ ಆಗುವ ವೇಳೆ ಆತನಿಗೆ ಸಂಕಷ್ಟ ಉಂಟಾಗಿದೆ.

ಹೈದರಾಬಾದ್‌ ನ ಊಬರ್​​ ಚಾಲಕ ಶ್ರೀಕಾಂತ್ ತಿರುಪತಿಗೆ ಹೋಗಿ ಕೂದಲು ನೀಡಿದ್ದಾರೆ. ಅಲ್ಲಿಂದ ಬಂದು ತನ್ನ ಕೆಲಸಕ್ಕೆ ಜಾಯಿನ್ ಆಗಿದ್ದು, ಊಬರ್ ಖಾತೆಯನ್ನು ಲಾಗಿನ್ ಆಗಬೇಕಾದರೆ, ಮುಖದ ಚೆಹರೆ ತುಂಬಾ ಅಗತ್ಯ ಆದರೆ, ಶ್ರೀಕಾಂತ್ ತಲೆ ಬೋಳಿಸಿದ್ದರಿಂದಾಗಿ ಅವರ ಗುರುತು ಪತ್ತೆಯಾಗದ ಕಾರಣ ಐಡಿ ತೆರೆದುಕೊಳ್ಳಲೇ ಇಲ್ಲ. ನಾಲ್ಕು ಬಾರಿ ಲಾಗಿನ್ ಆಗಲು ಪ್ರಯತ್ನಿಸಿದ್ದರಿಂದ ಶ್ರೀಕಾಂತ್ ಅವರ ಅಕೌಂಟ್ ಬ್ಲಾಕ್ ಆಗಿದೆ.  ಇದರಿಂದಾಗಿ ಅವರು ಮತ್ತೆ ಲಾಗಿನ್ ಆಗಲು ಸಾಧ್ಯವಾಗಿಲ್ಲ. ಇದೀಗ ಅವರು ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ.

ನಾನು ತಿಂಗಳವರೆಗೆ ಹಲವಾರು ಬಾರಿ ಊಬರ್ ಕಚೇರಿಗೆ ಹೋಗಿ, ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದೆ. ಇ-ಮೇಲ್ ಮೂಲಕ ದೂರು ನೀಡಲು ಪ್ರಯತ್ನಿಸಿದೆ. ಆದರೆ, ಈ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ ”ಎಂದು ಶ್ರೀಕಾಂತ್ ಹೇಳಿದ್ದಾರೆ.

ಡ್ರೈವಿಂಗ್​ನಿಂದಲೇ ಶ್ರೀಕಾಂತ್ ಅವರ ಜೀವನ ನಡೆಯುತ್ತಿದೆ. ಅವರು ತಮ್ಮ ಕಾರಿಗೆ ಇಎಂಐ ಕೂಡ ಪಾವತಿಸಬೇಕು. ಈ ಸಮಸ್ಯೆಯನ್ನು ಬಗೆಹರಿಸಿ ಎಂದು ರಾಷ್ಟ್ರೀಯ ಆ್ಯಪ್ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶೇಖ್ ಸಲಾಹುದ್ದೀನ್ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ