ಮಸೀದಿ ಬಳಿಯಲ್ಲಿ ಯುವಕನಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನ - Mahanayaka
12:13 PM Wednesday 15 - October 2025

ಮಸೀದಿ ಬಳಿಯಲ್ಲಿ ಯುವಕನಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನ

ullala
13/04/2022

ಉಳ್ಳಾಲ : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿಯ ಮಸೀದಿ ಬಳಿ ನಾಲ್ವರ ತಂಡವೊಂದು ಏಪ್ರಿಲ್ 12ರ ಮಂಗಳವಾರ ತಡರಾತ್ರಿ ಯುವಕನೋರ್ವನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.


Provided by

ಚಾಕು ಇರಿತಕ್ಕೆ ಒಳಗಾದ ಯುವಕನನ್ನು ಮಾಸ್ತಿಕಟ್ಟೆ ನಿವಾಸಿ ಅಲ್-ಸಾದೀನ್ (24) ಎಂದು ಗುರುತಿಸಲಾಗಿದೆ.

ಮಸೀದಿ ಸಮೀಪ‌ ನಿಂತಿದ್ದ ವೇಳೆ ತಂಡ ಚೂರಿಯಿಂದ ಬೆನ್ನಿನ ಭಾಗಕ್ಕೆ ಇರಿದು ಕೊಲೆಗೆ ಯತ್ನಿಸಿದೆ. ಮಾಹಿತಿಗಳ ಪ್ರಕಾರ ಈ ನಾಲ್ಕು ಮಂದಿ ಸ್ನೇಹಿತರಾಗಿದ್ದು, ಒಟ್ಟಿಗೆ ಮಾತನಾಡುತ್ತಿದ್ದ ಸಂದರ್ಭ ಯುವತಿಯ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದು ಚೂರಿಯಿಂದ ಇರಿದಿದ್ದಾರೆ ಎನ್ನಲಾಗ್ತಿದೆ.

ದಾಳಿಗೊಳಗಾದವನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳಿವೆ. ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಗೆ ಸೇರಿದ ಪೊಲೀಸ್ ವಾಹನವನ್ನು ಧ್ವಂಸ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು

ಘಟನೆ ಬಳಿಕ ದೇರಳಕಟ್ಟೆ ಆಸ್ಪತ್ರೆಗೆ ಪೊಲೀಸ್ ಕಮೀಷನರ್ ಶಶಿ ಕುಮಾರ್, ಎಸಿಪಿ ದಿನಕರ್ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸಂದೀಪ್ ನೇತೃತ್ವದ ತಂಡ ಭೇಟಿ ನೀಡಿದ್ದು ತನಿಖೆ ಆರಂಭಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಂದೂ ಗುತ್ತಿಗೆದಾರನ ಆತ್ಮಹತ್ಯೆ: ರಾಜೀನಾಮೆ ನೀಡುತ್ತಾರಾ?

ಸಿಆರ್‌ ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸ್ ಕಾರ್ಯಾಚರಣೆ: ಮೂವರು ಉಗ್ರರ ಬಂಧನ

ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ!

ಕೇಬಲ್ ಕಾರ್ ಡಿಕ್ಕಿ ಪ್ರಕರಣ: ಮೂವರು ಪ್ರವಾಸಿಗಳ ದಾರುಣ ಸಾವು

ಇತ್ತೀಚಿನ ಸುದ್ದಿ