ಯುವತಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಯುವಕ; ಆದರೆ ಮೃತಪಟ್ಟಿದ್ದು ಯುವಕ - Mahanayaka
11:15 PM Tuesday 14 - October 2025

ಯುವತಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಯುವಕ; ಆದರೆ ಮೃತಪಟ್ಟಿದ್ದು ಯುವಕ

kerala
29/03/2022

ಕೋಝಿಕ್ಕೋಡ್: ಪ್ರೀತಿಸಿದ ಯುವತಿಗೆ ಬೇರೊಂದು ಮದುವೆ ನಿಶ್ಚಯವಾಗಿದರಿಂದ ನೊಂದ ಪ್ರೇಮಿಯೋರ್ವ ಯುವತಿಯನ್ನು ಬೆಂಕಿ ಹಚ್ಚಿ ಹತ್ಯೆ ನಡೆಸಲು ಯತ್ನಿಸಿದ್ದು, ಆದರೆ, ಯುವಕನೇ ಬೆಂಕಿ ಹತ್ತಿಕೊಂಡು ಸಾವನ್ನಪ್ಪಿದ ಘಟನೆ ಕೇರಳದ ಕೋಝಿಕ್ಕೋರ್ ನ ನಾಡಪುರಂನಲ್ಲಿ ನಡೆದಿದೆ.


Provided by

ವಲಯಂ ಪೊಲೀಸ್ ಠಾಣೆ ವ್ಯಾಪ್ತಿಯ ಜಾತಿಯೇರಿ ಈ ಘಟನೆ ನಡೆದಿದ್ದು, ಕಲ್ಲುಮ್ಮಲ್ ಪೊನ್ಪೆಟ್ಟಾ ನಿವಾಸಿ 42 ವರ್ಷ ವಯಸ್ಸಿನ ರತ್ನೇಶ್ ಮೃತ ಯುವಕ ಎಂದು ಗುರುತಿಸಲಾಗಿದ್ದು, ಯುವತಿ, ಆಕೆಯ ಸಹೋದರ ಹಾಗೂ ತಾಯಿ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ರತ್ನೇಶ್ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಆಕೆಗೆ ಬೇರೆ ವಿವಾಹ ನಿಶ್ಚಯವಾಗಿದ್ದರಿಂದಾಗಿ ತೀವ್ರವಾಗಿ ಆಕ್ರೋಶಗೊಂಡಿದ್ದ ಎನ್ನಲಾಗಿದೆ. ಬೆಳಗ್ಗಿನ ಜಾವ 2 ಗಂಟೆಯ ವೇಳೆ ಕಲ್ಲುಮ್ಮಲ್ ಚೆರಿಯ ಕುಣಿಯಲ್ಲಿರುವ ಯುವತಿಯ ಮನೆಗೆ ಬಂದು ಟೆರೆಸ್ ಹತ್ತಿದ ರತ್ನೇಶ್, ಮಹಡಿಯ ಬೆಡ್ ರೂಮ್ ಬಾಗಿಲು ತೆರೆದು ಕೋಣೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ತನ್ನ ಮೇಲೆಯೂ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

ಮನೆಗೆ ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಕಂಡು ಸ್ಥಳೀಯರು ತಕ್ಷಣವೇ ಮನೆಯಲ್ಲಿದ್ದವರನ್ನು ರಕ್ಷಿಸಿದ್ದಾರೆ. ರತ್ನೇಶ್ ನ ಮೈಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದ.

ಇನ್ನೂ ಘಟನೆಯಲ್ಲಿ ಯುವತಿ, ಆಕೆಯ ಸಹೋದರ ಹಾಗೂ ತಾಯಿ ಗಾಯಗೊಂಡಿದ್ದು, ಅವರನ್ನು ವಡಕರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

1 ಕೋಟಿ ರೂ.ಗೂ ಅಧಿಕ ಮೌಲ್ಯದ ಬ್ರೌನ್ ಶುಗರ್ ಸಹಿತ ಆರೋಪಿಗಳ ಬಂಧನ

ಒಂದೊಂದೇ ರೂಪಾಯಿ ಕೂಡಿಟ್ಟು ಬೈಕ್ ಖರೀದಿಸಿದ ಯುವಕ

ಬಸ್,  ದ್ವಿಚಕ್ರ ವಾಹನದ ನಡುವೆ ಅಪಘಾತ: ಹೆಡ್ ಕಾನ್ಸ್‌ಟೇಬಲ್ ಗೆ ಗಂಭೀರ ಗಾಯ

ರಂಜಾನ್ ಆರಂಭವಾಗುತ್ತಿದ್ದಂತೆಯೇ ಭಾರೀ ಬೆಲೆಗೆ ಮಾರಾಟವಾದ ಒಂಟೆ

ಹುಡುಗರ ಜೊತೆ ಸುತ್ತಾಡಿದ್ದಕ್ಕೆ ಬೈದ ಅಮ್ಮನನ್ನೇ ಹತ್ಯೆಗೈದ ಮಗಳು

 

ಇತ್ತೀಚಿನ ಸುದ್ದಿ