ಮಾಸ್ಕ್ ಧರಿಸಿಲ್ಲ ಎಂದು ಯುವಕನ ಕೈ, ಪಾದಕ್ಕೆ ಮೊಳೆ ಹೊಡೆದ ಪೊಲೀಸರು - Mahanayaka
4:09 PM Monday 15 - September 2025

ಮಾಸ್ಕ್ ಧರಿಸಿಲ್ಲ ಎಂದು ಯುವಕನ ಕೈ, ಪಾದಕ್ಕೆ ಮೊಳೆ ಹೊಡೆದ ಪೊಲೀಸರು

uttar pradesh police
27/05/2021

ಉತ್ತರಪ್ರದೇಶ: ಮಾಸ್ಕ್ ಧರಿಸಿಲ್ಲ ಎನ್ನುವ ಕಾರಣಕ್ಕಾಗಿ ಪೊಲೀಸರು ಯುವಕನೋರ್ವನ ಕಾಲು, ಕೈ ಹಾಗೂ ಉಗುರಿಗೆ  ಮೊಳೆ ಹೊಡೆದ ಘಟನೆ ಬರೇಲಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸರ ವಿರುದ್ಧ ದೂರು ದಾಖಲಾಗಿದೆ.


Provided by

ಮನೆಯ ಮುಂಭಾಗದ ರಸ್ತೆಯಲ್ಲಿ ಮಾಸ್ಕ್ ಧರಿಸದೇ ತನ್ನ ಪುತ್ರ ಕುಳಿತಿದ್ದ. ಈ ವೇಳೆ ಬಂದ ಪೊಲೀಸರು ಆತನನ್ನು ಇಲ್ಲಿಂದ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಪುತ್ರನನ್ನು ಹುಡುಕಾಟ ನಡೆಸಿದರೂ ಆತ ಪತ್ತೆಯಾಗಿರಲಿಲ್ಲ.  ಒಂದು ಗಂಟೆಗಳ ಬಳಿಕ ಆತ ಪತ್ತೆಯಾಗಿದ್ದು, ಆತನ  ಪಾದ ಮತ್ತು ಕೈಗೆ ಮೊಳೆ ಹೊಡೆಯಲಾಗಿತ್ತು ಎಂದು ಸಂತ್ರಸ್ತನ ತಾಯಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಇಂಡಿಯಾ ಟು ಡೇ ವರದಿ ಮಾಡಿದೆ.

ಇನ್ನೂ ಉತ್ತರಪ್ರದೇಶದಲ್ಲಿ ಪೊಲೀಸರಿಂದ ಜನರು ನ್ಯಾಯ ಪಡೆದುಕೊಳ್ಳುವುದೇ ಕಷ್ಟಕರವಾಗಿದ್ದು, ಯುವಕನ ತಾಯಿಯ ಆರೋಪವನ್ನು ಪೊಲೀಸರು ನಿರಾಕರಿಸಿದ್ದು, ನಾವು ಯುವಕನ ಪಾದ, ಕೈಗೆ ಮೊಳೆ ಹೊಡೆದಿಲ್ಲ. ಅವನೊಬ್ಬ ಕ್ರಿಮಿನಲ್ ಆತನ ಮೇಲೆ ಅನೇಕ ಪ್ರಕರಣಗಳು ಇವೆ ಎಂದು ಹೇಳಿದ್ದಾರೆ

ಇತ್ತೀಚಿನ ಸುದ್ದಿ