ಝಿಯೋನಿಸಮ್ ವಿಮರ್ಶೆ ವಿಚಾರ: ಫೇಸ್ ಬುಕ್ ಹೇಳಿದ್ದೇನು..? - Mahanayaka

ಝಿಯೋನಿಸಮ್ ವಿಮರ್ಶೆ ವಿಚಾರ: ಫೇಸ್ ಬುಕ್ ಹೇಳಿದ್ದೇನು..?

10/07/2024


Provided by

ಝಿಯೋನಿಸಮ್ ಅನ್ನು ವಿಮರ್ಶಿಸುವ ಬಗ್ಗೆ ತನ್ನ ನಿಲುವನ್ನು ಫೇಸ್ ಬುಕ್ ಇನ್ ಸ್ಟಾಗ್ರಾಂನ ಮಾತೃ ಸಂಸ್ಥೆಯಾಗಿರುವ ಮೆಟ ಕಂಪೆನಿ ಸ್ಪಷ್ಟಪಡಿಸಿದೆ. ಝಿಯೋನಿಷ್ಟ್ ಗಳನ್ನು ಗುರಿಯಾಗಿಸಿ ಇನ್ನು ಮುಂದೆ ಹಾಕಲಾಗುವ ಎಲ್ಲಾ ಪೋಸ್ಟ್ ಗಳನ್ನೂ ತಡೆಯುವುದಾಗಿ ಮೆಟ ಕಂಪನಿ ಹೇಳಿದೆ.

ಝಿಯೋನಿಷ್ಟ್ ಗಳನ್ನು ವಿರೋಧಿಸುತ್ತಿದ್ದೇವೆ ಎಂಬ ನೆಪದಲ್ಲಿ ಯಹೂದಿಯರನ್ನು ಮತ್ತು ಇಸ್ರೇಲಿಗಳ ವಿರುದ್ಧ ಹರಿಹಾಯುವುದಕ್ಕೆ ಇನ್ನು ಮುಂದೆ ಅವಕಾಶ ನೀಡಲ್ಲ ಎಂದು ಮೆಟಾ ಹೇಳಿದೆ. ಝಿಯೋನಿಷ್ಟ್ ಎಂಬ ಪದ ಪ್ರಯೋಗಿಸಿ ಆಕ್ಷೇಪಾರ್ಹವಾದ ಪೋಸ್ಟುಗಳನ್ನು ಇನ್ನು ಮುಂದೆ ತೆರವುಗೊಳಿಸುವುದಾಗಿ ಮೆಟಾ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಯಹೂದ್ಯರು ಮತ್ತು ಇಸ್ರಾಯಿಲಿಗಳನ್ನು ಕ್ರೂರಿಗಳಂತೆ ಬಿಂಬಿಸುವುದು, ಅವರ ವಿರುದ್ಧ ಆಕ್ರಮಣಕ್ಕೆ ಕರೆ ನೀಡುವುದು ಮತ್ತು ಅವರ ಅಸ್ತಿತ್ವವನ್ನು ನಿರಾಕರಿಸುವ ರೀತಿಯ ಪೋಸ್ಟುಗಳಿಗೆ ಇನ್ನು ಮುಂದೆ ಅವಕಾಶ ಇಲ್ಲ ಎಂದು ಮೆಟಾ ಹೇಳಿದೆ. ಫೇಸ್ ಬುಕ್ ಇನ್ಸ್ಟಾಗ್ರಾಮ್ ಥ್ರೆಡ್ ಮುಂತಾದ ಮೆಟದ ಸೋಶಿಯಲ್ ಮೀಡಿಯಾ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ