ಝೊಮೆಟೋ ಡೆಲಿವರಿ ಬಾಯ್ ಹೊಟೇಲ್ ಸಿಬ್ಬಂದಿ ನಡುವೆ ಮಾರಾಮಾರಿ! - Mahanayaka
11:35 PM Wednesday 14 - January 2026

ಝೊಮೆಟೋ ಡೆಲಿವರಿ ಬಾಯ್ ಹೊಟೇಲ್ ಸಿಬ್ಬಂದಿ ನಡುವೆ ಮಾರಾಮಾರಿ!

hotel vs zometo
28/01/2022

ಬೆಂಗಳೂರು: ಝೊಮೆಟೊ ಡೆಲಿವರಿ ಬಾಯ್ ಹಾಗೂ ಹೊಟೇಲ್ ಸಿಬ್ಬಂದಿ ನಡುವೆ ಮಾರಾಮಾರಿ ನಡೆದ ಘಟನೆ ಬಿಟಿಎಂ ಲೇಔಟ್ ಸೆಕೆಂಡ್ ಸ್ಟೇಜ್ ನಲ್ಲಿ ನಡೆದಿದ್ದು, ತಡ ರಾತ್ರಿ 2 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಬಿಟಿಎಂ ಲೇಔಟ್ ನ ಸೆಕೆಂಡ್ ಸ್ಟೇಜ್ ನಲ್ಲಿರುವ ಕೇರಳದ ಹೊಟೇಲ್ ಗೆ ತಡರಾತ್ರಿ 2 ಗಂಟೆಯ ಸುಮಾರಿಗೆ ಆರ್ಡರ್ ತೆಗೆದುಕೊಂಡು ಹೋಗಲು ಡೆಲಿವರಿ ಬಾಯ್ ಹೊಟೇಲ್ ಗೆ ಬಂದಿದ್ದು, ಈ ವೇಳೆ ಪರಸ್ಪರ ಗಲಾಟೆ ನಡೆದಿದೆ ಎನ್ನಲಾಗಿದೆ.

ಮಾತಿಕ ಚಕಮಕಿಯ ನಡುವೆ ಡೆಲಿವರಿ ಬಾಯ್, ಊರು ಬಿಟ್ಟು ಬಂದವರು ನಮ್ಮನ್ನು ಹಿಯಾಳಿಸ್ತಿಯಾ? ಎಂದು ಹೊಟೇಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದು, ಈ ವೇಳೆ ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ ತಲುಪಿತ್ತು ಎನ್ನಲಾಗಿದೆ.

ಜಗಳ ಆರಂಭವಾಗಿ ಸ್ವಲ್ಪ ಹೊತ್ತಿನಲ್ಲೇ 40ರಿಂದ 50 ಡೆಲಿವರಿ ಬಾಯ್ಸ್ ಹೊಟೇಲ್ ಮುಂದೆ ಗೂಂಡಾಗಿರಿ ನಡೆಸಿದ್ದು, ಹೊಟೇಲ್ ನಲ್ಲಿರಿಸಿದ್ದ ಪಾಟ್ ಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇತ್ತೀಚಿನ ಸುದ್ದಿ