ಸಾರಿಗೆ ಇಲಾಖೆಯ ಹಲವು ಸೇವೆಗಳು ಶೀಘ್ರ ಆನ್‍ ಲೈನ್‍ ನಲ್ಲಿ ಲಭ್ಯ-ಸಾರಿಗೆ ಆಯುಕ್ತರು - Mahanayaka

ಸಾರಿಗೆ ಇಲಾಖೆಯ ಹಲವು ಸೇವೆಗಳು ಶೀಘ್ರ ಆನ್‍ ಲೈನ್‍ ನಲ್ಲಿ ಲಭ್ಯ-ಸಾರಿಗೆ ಆಯುಕ್ತರು

16/10/2020

ಬೆಂಗಳೂರು: ಸರಕು ಸಾಗಣೆ ಪರವಾನಗಿಗಳನ್ನು ಪಡೆಯಲು ಹಾಗೂ ವಾಹನಗಳ ಮಾಲೀಕತ್ವ ವರ್ಗಾವಣೆಗಳನ್ನು ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡದೇ ತಾವು ಇದ್ದಲ್ಲಿಂದಲೇ ಆನ್‍ಲೈನ್ ಮೂಲಕ ಸೇವೆಗಳನ್ನು ಪಡೆಯಲು ತಂತ್ರಾಂಶವನ್ನು ಸಿದ್ದಪಡಿಸಿದ್ದು, ಸದ್ಯದಲ್ಲೇ ಬಿಡುಗಡೆಗೊಳಿಸಲಾಗುವುದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ತಿಳಿಸಿದ್ದಾರೆ.

ನಕಲು ಚಾಲನಾ ಅನುಜ್ಞಾ ಪತ್ರ, ಚಾಲನಾ ಅನುಜ್ಞಾ ಪತ್ರ ನವೀಕರಣ, ನಕಲು ನೋಂದಣಿ ಪ್ರಮಾಣ ಪತ್ರ, ಬಿಡುಗಡೆ ಪ್ರಮಾಣ ಪತ್ರಗಳನ್ನು ಸಂಪೂರ್ಣವಾಗಿ ಆನ್‍ ಲೈನ್ ಮೂಲಕ ದೊರಕುವಂತೆ ಮಾಡಲು ಉದ್ದೇಶಿಸಲಾಗಿದೆ.

ಈ ಎಲ್ಲಾ ಆನ್‍ಲೈನ್ ಸೇವೆಗಳನ್ನು ಪಡೆಯಲು ಸಂಬಂಧಪಟ್ಟ ವ್ಯಕ್ತಿಯೇ ಅರ್ಜಿ ಸಲ್ಲಿಸಿರುವುದನ್ನು ಖಾತ್ರಿಪಡಿಸಿಕೊಳ್ಳಲು ವಾಹನ ನೋಂದಣಿ/ ಚಾಲನಾ ಅನುಜ್ಞಾ ಪತ್ರ ಪಡೆಯುವ ಸಮಯದಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುವುದು.ಸಾರಿಗೆ ಇಲಾಖೆಯ ಸಾರಥಿ/ವಾಹನ್ ಡೇಟಾಬೇಸ್‍ಗಳಲ್ಲಿ ಇರುವ ಮೊಬೈಲ್ ಸಂಖ್ಯೆಗಳು ಸಂಬಂಧಪಟ್ಟ ವ್ಯಕ್ತಿಯದಾಗಿರದೆ ಬೇರೆಯವರ ಮೊಬೈಲ್ ಸಂಖ್ಯೆಯನ್ನು ನಮೂದಿಸಿರುವ ಪ್ರಕರಣಗಳು ಬೆಳಕಿಗೆ ಬಂದಿರುತ್ತದೆ ಆದ್ದರಿಂದ ಆನ್‍ಲೈನ್ ಸೇವೆಯನ್ನು ಪಡೆಯಲು ವಾಹನ ಮಾಲೀಕರು/ ಚಾಲನಾ ಅನುಜ್ಞಾ ಪತ್ರ ಹೊಂದಿರುವ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನೇ ಬಳಸುವುದು ಅವಶ್ಯಕವಾಗಿರುವುದರಿಂದ ಸಂಬಂಧಪಟ್ಟವರು parivahan.gov.in ಪೋರ್ಟಲ್‍ನಲ್ಲಿ ತಮ್ಮ ಮೊಬೈಲ್ ಸಂಖ್ಯೆಗಳನ್ನು ಪರಿಷ್ಕರಿಸುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ