100 ಐಶಾರಾಮಿ ಕಾರುಗಳನ್ನು ಕದ್ದಿದ್ದ ಕಳ್ಳ ಕೊನೆಗೂ ಸಿಕ್ಕಿ ಬಿದ್ದ! - Mahanayaka
11:50 PM Thursday 11 - December 2025

100 ಐಶಾರಾಮಿ ಕಾರುಗಳನ್ನು ಕದ್ದಿದ್ದ ಕಳ್ಳ ಕೊನೆಗೂ ಸಿಕ್ಕಿ ಬಿದ್ದ!

car
16/01/2022

ನವದೆಹಲಿ:  ಐಷಾರಾಮಿ ಕಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಕಳ್ಳನನ್ನು ದೆಹಲಿ ಪೊಲೀಸರು ಬಂಧಿಸಿದ್ದು,  2003ರಿಂದ ಈತ ದುಬಾರಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದು, ಇದೀಗ ದೆಹಲಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

42 ವರ್ಷ ವಯಸ್ಸಿನ ಕುನಾಲ್ ಎಂಬಾತ ಬಂಧಿತ ಆರೋಪಿಯಾಗಿದ್ದು,  ಬಂಧಿತನಿಂಧ ಮೂರು ಕಾರುಗಳು, ನಂಬರ್ ಪ್ಲೇಟ್ ಗಳು, ಕಾರಿನ ಲಾಕ್ ಗಳು ಮತ್ತು ಬಿಡಿ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. ಈವರೆಗೆ ಈತ ಸುಮಾರು 100 ಕಾರುಗಳನ್ನು ಕದ್ದಿದ್ದಾನೆ ಎಂದು ವಿಚಾರಣೆ ವೇಳೆ ತಿಳಿಸಿದ್ದು, ಕಾರನ್ನು ಕದ್ದ ಬಳಿಕ ಉತ್ತರ ಪ್ರದೇಶ ಮತ್ತು ಕಾಶ್ಮೀರ ಮೊದಲಾದ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ತಿಳಿಸಿದ್ದಾನೆ.

ಇತ್ತೀಚೆಗೆ ಶ್ರೆತಂಕ್ ಅಗರ್ವಾಲ್ ಎಂಬುವರು ತಮ್ಮ ಮನೆಯ ಮುಂದೆ ಪಾರ್ಕ್ ಮಾಡಿದ್ದ ಟೊಯೋಟಾ ಫಾರ್ಚುನರ್ ಕಾರು ಕಳ್ಳತನ ಆಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಶ್ಮೀರಿ ಗೇಟ್ನಲ್ಲಿ ಫಾರ್ಚುನರ್ ಕಾರಿನ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಆತನಿಂದ ವಶಪಡಿಸಿಕೊಂಡ ಕಾರಿನ ನೋಂದಣಿ ಮತ್ತು ನಂಬರ್ ಗೆ ಯಾವುದೇ ಸಂಬಂಧವಿಲ್ಲ ಎಂಬ ಶಂಕೆಯ ಮೇರೆಗೆ ಅವನನ್ನು ಬಂಧಿಸಲಾಯಿತು. ಇದಾದ ಬಳಿಕ ಆತನ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಕುನಾಲ್ ಸುಮಾರು 100 ಕಾರುಗಳನ್ನು ಕದ್ದಿರುವ ಬಗ್ಗೆ ಮಾಹಿತಿ ದೊರಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇನ್ಮುಂದೆ ಜ.26ರ ಬದಲಿಗೆ ಜ.23ರಿಂದ ಗಣರಾಜ್ಯೋತ್ಸವ ಆಚರಣೆ

ಕೇಂದ್ರ ಗಣರಾಜ್ಯೋತ್ಸವ ಸಮಿತಿಯಿಂದ ನಾರಾಯಣ ಗುರುಗಳ ಚಿತ್ರದ ಸ್ತಬ್ಧಚಿತ್ರ ತಿರಸ್ಕಾರ: ಎಚ್‌ ಡಿಕೆ ಆಕ್ರೋಶ

ಸಮಾಜವಾದಿ ಪಾರ್ಟಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಭೀಮ್ ಆರ್ಮಿ

ವೈದ್ಯಕೀಯ ಚಿಕಿತ್ಸೆಗಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅಮೆರಿಕಕ್ಕೆ

ಆಸ್ಪತ್ರೆ ಆವರಣದಲ್ಲಿ ಪತ್ತೆಯಾಯ್ತು 11 ತಲೆ ಬುರುಡೆ, ಬ್ರೂಣಗಳ ಎಲುಬು!

ಇತ್ತೀಚಿನ ಸುದ್ದಿ