ಉತ್ತರಪ್ರದೇಶದಲ್ಲಿ ಭಾರಿ ಮಳೆ, ಪ್ರವಾಹ: ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ನದಿ; 14 ಮಂದಿ ಸಾವು
ಭಾರೀ ಮಳೆಯ ನಂತರ ಗಂಗಾ, ಶಾರದಾ ಮತ್ತು ಘಾಘ್ರಾ ಸೇರಿದಂತೆ ಅನೇಕ ನದಿಗಳು ಉತ್ತರ ಪ್ರದೇಶದಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
ಶನಿವಾರದಿಂದ ಮಳೆ ಸಂಬಂಧಿತ ಘಟನೆಗಳಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೀರತ್ ನಲ್ಲಿ ಕಟ್ಟಡ ಕುಸಿತದಲ್ಲಿ 10 ಜನರು ಸೇರಿದ್ದಾರೆ.
ಪೂರ್ವ ಯುಪಿಯ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ಯುಪಿಯ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯನ್ನು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರೀ ಮಳೆಯಿಂದಾಗಿ ಮೀರತ್ ನ ಜಾಕಿರ್ ನಗರ ಪ್ರದೇಶದಲ್ಲಿ ಶನಿವಾರ ಮೂರು ಅಂತಸ್ತಿನ ಮನೆ ಕುಸಿದು 10 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆಯಿಂದಾಗಿ ಮೀರತ್ ನ ಜಾಕಿರ್ ನಗರ ಪ್ರದೇಶದಲ್ಲಿ ಶನಿವಾರ ಮೂರು ಅಂತಸ್ತಿನ ಮನೆ ಕುಸಿದು 10 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮಾಡೀ ವೇಳೆ ಸಂಬಂಧಿಕರು ಈ 15 ಜನರ ಬಗ್ಗೆ ಮಾಹಿತಿ ನೀಡಿದರು. ಕಟ್ಟಡ ಕುಸಿಯುತ್ತಿದ್ದಾಗ ಮೂವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ಮೀನಾ ಸುದ್ದಿಗಾರರಿಗೆ ತಿಳಿಸಿದ್ದಾರೆ.