ಈ ಬಾರಿ ಪ್ರೇಮಿಗಳ ದಿನದ ಅಂಗವಾಗಿ BLR ವಿಮಾನ ನಿಲ್ದಾಣದಲ್ಲಿ ಗುಲಾಬಿ ಸಾಗಣೆಯಲ್ಲಿ ಶೇ.14ರಷ್ಟು ಹೆಚ್ಚಳ - Mahanayaka
9:54 PM Wednesday 17 - September 2025

ಈ ಬಾರಿ ಪ್ರೇಮಿಗಳ ದಿನದ ಅಂಗವಾಗಿ BLR ವಿಮಾನ ನಿಲ್ದಾಣದಲ್ಲಿ ಗುಲಾಬಿ ಸಾಗಣೆಯಲ್ಲಿ ಶೇ.14ರಷ್ಟು ಹೆಚ್ಚಳ

rose
15/02/2023

ಬೆಂಗಳೂರು: ಪೆರಿಷಬಲ್‌ ಸರಕು ಸಾಗಣೆಯಲ್ಲಿ ಮೊದಲ ಆದ್ಯತಾ ವಿಮಾನ ನಿಲ್ದಾಣ ಎಂಬ ಖ್ಯಾತಿ ಪಡೆದಿರುವ ಬಿಎಲ್‌ ಆರ್‌ ಏರ್‌ ಪೋರ್ಟ್ ಕಾರ್ಗೋ ಈ ವರ್ಷದ ಪ್ರೇಮಿಗಳ ದಿನದ ಪೂರ್ವದಲ್ಲಿ ಗುಲಾಬಿ ಸಾಗಣೆಯಲ್ಲಿ ಎರಡು ಪಟ್ಟು ಹೆಚ್ಚಳ ಸಾಗಣೆ ಮಾಡುವ ಮೂಲಕ ಮತ್ತೊಮ್ಮೆ ಸಾಕ್ಷಿಯಾಗಿದೆ.


Provided by

BLR ವಿಮಾನ ನಿಲ್ದಾಣದಲ್ಲಿ ಗುಲಾಬಿಗಳ ಋತುವಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಕ್ರಿಯೆಗೊಳಿಸಲಾದ ಗುಲಾಬಿ ಸಾಗಣೆಯಲ್ಲಿ ಶೇ.14 ರಷ್ಟು ಹೆಚ್ಚಳ ಕಂಡು ಬಂದಿದೆ.

ಈ ಬಾರಿ 17.4 ಮಿಲಿಯನ್ ಗುಲಾಬಿ ಗಳನ್ನು (589,296 ಕೆಜಿ) ಕೌಲಾಲಂಪುರ್, ಸಿಂಗಾಪುರ್, ಕುವೈತ್, ಮನಿಲಾ, ಆಕ್ಲೆಂಡ್, ನ್ಯೂಯಾರ್ಕ್, ಲೆಬನಾನ್, ಮಾಲ್ಡೀವ್ಸ್, ಜೋರ್ಡಾನ್ ಮತ್ತು ದುಬೈ ಈ ದೇಶಗಳಿಗೆ ಪ್ರಮುಖವಾಗಿ ರಫ್ತು ಮಾಡಲಾಯಿತು.. BLR ಕಾರ್ಗೋ ಒಟ್ಟು 15 ಜಾಗತಿಕ ತಾಣಗಳಿಗೆ ಗುಲಾಬಿಗಳನ್ನು ಕಳುಹಿಸಿದೆ.

ದೇಶೀಯ ವಿಭಾಗದಲ್ಲಿ ಒಟ್ಟು 6.6 ಮಿಲಿಯನ್ ಗುಲಾಬಿಗಳನ್ನು (178,200 ಕೆಜಿ) ಸಂಸ್ಕರಿಸಲಾಗಿದೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.31ರಷ್ಟು ಹೆಚ್ಚಳವಾಗಿದೆ. ದೆಹಲಿ, ಕೋಲ್ಕತ್ತಾ, ಮುಂಬೈ, ಗುವಾಹಟಿ, ಬಾಗ್ಡೋಗ್ರಾ, ಅಹಮದಾಬಾದ್, ಕೊಚ್ಚಿ, ದರ್ಭಾಂಗ, ಚಂಡೀಗಢ ಮತ್ತು ಪಾಟ್ನಾ ಸೇರಿದಂತೆ 34 ದೇಶೀಯ ಸ್ಥಳಗಳಲ್ಲಿ ವ್ಯಾಲೆಂಟೈನ್ಸ್ ವಾರದ ಅಂಗವಾಗಿ ರವಾನೆ ಮಾಡಲಾಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ