ಚೀನಾದಲ್ಲಿ ಪರ್ವತ ಕುಸಿತ: 14 ಮಂದಿ ಸಾವು
ಪರ್ವತ ಕುಸಿದು 14 ಮಂದಿ ಸಾವನ್ನಪ್ಪಿ ಐವರು ನಾಪತ್ತೆ ಆದ ಘಟನೆ ಚೀನಾ ದೇಶದ ಸಿಚುವಾನ್ ಪ್ರಾಂತ್ಯದಲ್ಲಿ ನಡೆದಿದೆ. ಜಿಂಕೌಹೆ ಜಿಲ್ಲೆಯ ಯೊಂಗ್‌ಶೆಂಗ್ ಟೌನ್ ಶಿಪ್‌ನಲ್ಲಿರುವ ಅರಣ್ಯ ಫಾರ್ಮ್‌ನಲ್ಲಿ ಈ ಘಟನೆ ನಡೆದಿದೆ. 180ಕ್ಕೂ ಹೆಚ್ಚು ಜನರನ್ನು ಒಳಗೊಂಡ ರಕ್ಷಣಾ ತಂಡವು ನಾಪತ್ತೆಯಾದವರಿಗಾಗಿ ಇನ್ನೂ ಹುಡುಕಾಟ ನಡೆಸುತ್ತಿದೆ.
ಬದುಕುಳಿದವರನ್ನು ಹುಡುಕಲು ಸಾಧ್ಯವಾದಷ್ಟು ಪ್ರಯತ್ನಿಸಿ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೇ ವರ್ಷ ಫೆಬ್ರವರಿಯಲ್ಲಿ, ಚೀನಾದ ಉತ್ತರ ಒಳಗಿನ ಮಂಗೋಲಿಯಾ ಪ್ರದೇಶದಲ್ಲಿ ಗಣಿ ಕುಸಿದು ಕನಿಷ್ಠ ನಾಲ್ವರು ಸಾವನ್ನಪ್ಪಿದರು ಮತ್ತು 49 ಮಂದಿ ಕಾಣೆಯಾಗಿದ್ದರು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೂಡ ಹೆಚ್ಚಿನ ತಾಪಮಾನ ಮತ್ತು ಮಳೆಯಿಂದಾಗಿ ಚಿಲಿಯ ಪ್ಯಾಟಗೋನಿಯಾ ಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ನೇತಾಡುತ್ತಿದ್ದ ಹಿಮನದಿಯ ಒಂದು ಭಾಗವು ಮುರಿದು ಹೋಗಿತ್ತು.
ಚೀನಾದ ಇನ್ನರ್ ಮಂಗೋಲಿಯಾ ಪ್ರದೇಶದಲ್ಲಿರುವ ಕೆಲ ಗಣಿಗಳು ಚೀನಾದ ಕಲ್ಲಿದ್ದಲು ಉತ್ಪಾದಕಗಳಾಗಿವೆ. ಚೀನೀ ಗಣಿಗಳು ಕಳೆದ ವರ್ಷದಿಂದ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದು ಆ ನಿಟ್ಟಿನಲ್ಲಿ ಸರಬರಾಜು ಮತ್ತು ಬೆಲೆ ಹೆಚ್ಚಿಸಲು ಪ್ರಯತ್ನಿಸುತ್ತಿವೆ ಎಂದು ಬಿಬಿಸಿ ವರದಿ ಮಾಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw