ಹಿಂದಿನ ದಿನದ ಬಿರಿಯಾನಿ ಸೇವಿಸಿ 17 ಮಂದಿ ಅಸ್ವಸ್ಥ! - Mahanayaka

ಹಿಂದಿನ ದಿನದ ಬಿರಿಯಾನಿ ಸೇವಿಸಿ 17 ಮಂದಿ ಅಸ್ವಸ್ಥ!

chikkamagaluru
21/11/2023


Provided by

ಚಿಕ್ಕಮಗಳೂರು: ಹಿಂದಿನ ದಿನದ ಬಿರಿಯಾನಿ ತಿಂದ ಪರಿಣಾಮ ಅಸ್ವಸ್ಥಗೊಂಡು ಸುಮಾರು 17 ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲಿನ ಶುಭಕಾರ್ಯ ಮುಗಿಸಿ ಸಂಜೆ ಸಂಬಂಧಿಕರಿಗಾಗಿ ಬಿರಿಯಾನಿ ನೀಡಲಾಗಿತ್ತು. ಬಿರಿಯಾನಿ ತಿಂದ ಬಳಿಕ ಅಸ್ವಸ್ಥರಾದ ಕಾರಣ 17 ಜನರನ್ನು ಕಡೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಕ್ಕಳು ಸೇರಿದಂತೆ 17 ಜನ ಅಸ್ವಸ್ಥಗೊಂಡಿದ್ದಾರೆ. ಕಡೂರು ಶಾಸಕ ಕೆ.ಎಸ್.ಆನಂದ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ