ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಆತುರ ನನಗಿಲ್ಲ, 2023ರ ಚುನಾವಣೆಗಾಗಿ ಕಾಯುತ್ತಿದ್ದೇನೆ | ಬಿ.ವೈ.ವಿಜಯೇಂದ್ರ - Mahanayaka

ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಆತುರ ನನಗಿಲ್ಲ, 2023ರ ಚುನಾವಣೆಗಾಗಿ ಕಾಯುತ್ತಿದ್ದೇನೆ | ಬಿ.ವೈ.ವಿಜಯೇಂದ್ರ

b y vijayendra
04/09/2021

ಬೆಂಗಳೂರು: ಸಿಂಧಗಿ ಮತ್ತು ಹಾನಗಲ್ ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಆತುರವಿಲ್ಲ, 2023ರ ವಿಧಾನಸಭಾ ಚುನಾವಣೆಗೆ ಕಾಯುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದು, ಉಪ ಚುನಾವಣೆಯಲ್ಲಿ ಅವರು ಕಣಕ್ಕಿಳಿಯುತ್ತಾರೆ ಎಂಬ ಊಹಾಪೋಹಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.


Provided by

ಸಿಂಧಗಿ ಜೆಡಿಎಸ್ ಶಾಸಕ ಎಂಸಿ ಮನಗೂಳಿ ಮತ್ತು ಹಾನಗಲ್ ಶಾಸಕ ಶಿವಕುಮಾರ್ ಉದಾಸಿ ಅವರ ನಿಧನದಿಂದ ತೆರವಾಗಿರುವ ಎರಡು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಆಂಗ್ಲ ಪತ್ರಿಕೆಯೊಂದರ ಜೊತೆಗೆ ಮಾತನಾಡಿರುವ ವಿಜಯೇಂದ್ರ ಈ ವಿಚಾರವನ್ನು ತಳ್ಳಿಹಾಕಿದ್ದು, ತಾನು 2023ರ ವಿಧಾನಸಭಾ ಚುನಾವಣೆಗೆ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

2023ರ ವಿಧಾನಸಭೆ ಚುನಾವಣೆಗೆ ಇನ್ನೂ 19 ತಿಂಗಳು ಮಾತ್ರ ಬಾಕಿಯಿದೆ. ನಾನು ಈಗ ತರಾತುರಿಯಲ್ಲಿ ಸ್ಪರ್ಧಿಸಿದರೆ, ನಾನು 2023 ರಲ್ಲಿ ನನ್ನ ಕ್ಷೇತ್ರವನ್ನು ಬದಲಾಯಿಸಬೇಕಾಗಬಹುದು. ನನ್ನ ಬೆಂಬಲಿಗರು ಶಾರ್ಟ್‌ ಲಿಸ್ಟ್ ಮಾಡುವ ಕ್ಷೇತ್ರದಿಂದ 2023 ರ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದಾರೆ.


Provided by

ಇನ್ನಷ್ಟು ಸುದ್ದಿಗಳು…

ರೈಲಿನೊಳಗೆ ಬರೇ ಒಳ ಉಡುಪಿನಲ್ಲಿ ಓಡಾಡಿದ ಶಾಸಕ | ವಿಡಿಯೋ ವೈರಲ್

ನವದೆಹಲಿಯ ಎಐಸಿಸಿ ಕಟ್ಟಡದಲ್ಲಿ ಐವನ್ ಡಿಸೋಜ ಕಚೇರಿ ಉದ್ಘಾಟನೆ | ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ

“ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ” | ಶಾ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದ ಸಚಿವ ಈಶ್ವರಪ್ಪ!

ಜಿಂಕೆಯನ್ನು ಬೇಟೆಯಾಡುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳಿಂದ ಗುಂಡಿನ ದಾಳಿ!

ತ್ರಿಸ್ಟಾರ್ ಹೊಟೇಲ್ ನಲ್ಲಿ 8 ತಿಂಗಳು ತಂಗಿದ | 25 ಲಕ್ಷ ರೂ. ಬಿಲ್ ಆದ ಬಳಿಕ ಆತ ಮಾಡಿದ್ದೇನು ಗೊತ್ತಾ?

ಗಂಡ, ಹೆಂಡತಿ ನಡುವೆ ರಾಜಿ ಪಂಚಾಯಿತಿ ವೇಳೆ ಮನ ಬಂದಂತೆ ಗುಂಡು ಹಾರಿಸಿದ ನಿವೃತ್ತ ಸೈನಿಕ | ಇಬ್ಬರು ಸಾವು

 

 

ಇತ್ತೀಚಿನ ಸುದ್ದಿ