21 ವರ್ಷದ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ! - Mahanayaka

21 ವರ್ಷದ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ!

kavana
28/05/2025


Provided by

ಹಾಸನ: 21 ವರ್ಷ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ  ಹಾಸನ ತಾಲೂಕಿನ ಕೆಲವತ್ತಿ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಪಾಪಣ್ಣ ಹಾಗೂ ಗಾಯತ್ರಿ ದಂಪತಿ ಪುತ್ರಿ ಕವನ ಕೆ.ವಿ (21) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ.  ಹಾಸನ ನಗರದ ಎಂ.ಜಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕವನ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು.

3 ವಿಷಯಗಳ ಪರೀಕ್ಷೆ ಬರೆದಿದ್ದ ಕವನ ಇನ್ನೂ 3 ವಿಷಯಗಳ ಪರೀಕ್ಷೆ ಬರೆಯಬೇಕಿತ್ತು. ಮನೆಗೆ ನೀರು ತಂದ ಕವನ ದಿಢೀರ್ ಎದೆ ನೋವಿನಿಂದ ಬಳಲಿದ್ದು, ತಾಯಿಯ ಜೊತೆಗೆ ನೀರು ಕೇಳಿದ್ದಾಳೆ. ತಾಯಿ ನೀರು ಕೊಡುವಷ್ಟರಲ್ಲಿ ಆಕೆ ಕುಸಿದು ಬಿದ್ದಿದ್ದಾಳೆ.

ಕೂಡಲೇ ಹಾಸನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಕವನ ಸಾವನ್ನಪ್ಪಿದ್ದಳು. ವಿದ್ಯಾರ್ಥಿನಿ ಸಡನ್ ಡೆತ್ ಪೋಷಕರು, ಸಹಪಾಠಿಗಳು, ಕಾಲೇಜು ಉಪನ್ಯಾಸಕ ವರ್ಗಕ್ಕೆ ಆಘಾತ ಮೂಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ