ಪಾಪ್ ಸಾಂಗ್ ಕೇಳಿದ್ದೇ ತಪ್ಪಂತೆ: ಕೊರಿಯಾದಲ್ಲಿ ಯುವಕನ ಶಿರಚ್ಛೇದ - Mahanayaka

ಪಾಪ್ ಸಾಂಗ್ ಕೇಳಿದ್ದೇ ತಪ್ಪಂತೆ: ಕೊರಿಯಾದಲ್ಲಿ ಯುವಕನ ಶಿರಚ್ಛೇದ

01/07/2024

ದಕ್ಷಿಣ ಕೊರಿಯಾದ ಕೆ-ಪಾಪ್‌ ಹಾಡು ಕೇಳಿದ ಅಪರಾಧಕ್ಕೆ ಸಾರ್ವಜನಿಕವಾಗಿ 22 ವರ್ಷದ ಯುವಕನ ಶಿರಚ್ಛೇದ ಮಾಡಿದ ಘಟನೆ ಉತ್ತರ ಕೊರಿಯಾದಲ್ಲಿ ನಡೆದಿದೆ. ದಕ್ಷಿಣ ಹ್ವಾಂಗೇ ಪ್ರಾಂತದ ಯುವಕನೊಬ್ಬ 70 ಕೊರಿಯನ್‌ ಹಾಡುಗಳು, 3 ಸಿನೆಮಾ ನೋಡಿದ್ದಕ್ಕಾಗಿ ಆತನ ಶಿರಚ್ಛೇದ ಮಾಡಲಾಗಿದೆ ಎಂದು ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯ ತಿಳಿಸಿದೆ.

ಉತ್ತರ ಕೊರಿಯಾದಲ್ಲಿ 2020ರಲ್ಲಿ ಪ್ರತಿಗಾಮಿ ಸಿದ್ಧಾಂತ ಹಾಗೂ ಸಂಸ್ಕೃತಿ ಕಾನೂನನ್ನು ಜಾರಿಗೆ ತರಲಾಗಿದೆ. ಈ ಕಾನೂನಿನ ಪ್ರಕಾರ ದಕ್ಷಿಣ ಕೊರಿಯಾದ ಪಾಪ್‌ ಸಂಸ್ಕೃತಿಯನ್ನು ಉತ್ತರ ಕೊರಿಯಾ ನಿರ್ಬಂಧಿಸಿದೆ. ಯುವಕ ಈ ಕಾನೂನನ್ನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ.

ಪಾಶ್ಚಾತ್ಯರ ಭ್ರಷ್ಟ ಸಂಸ್ಕೃತಿಯಿಂದ ಉತ್ತರ ಕೊರಿಯನ್ನರನ್ನು ರಕ್ಷಿಸುವ ಅಭಿಯಾನದ ಭಾಗವಾಗಿ ಈ ಕಾನೂನನ್ನು ಜಾರಿಗೆ ತರಲಾಗಿದೆ. ಕೆ-ಪಾಪ್‌, ಕೆ-ಡ್ರಾಮಗಳು ದಕ್ಷಿಣ ಕೊರಿಯಾದ ಮನೋರಂಜನೆಯ ರೂಪಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ಇವುಗಳು ಇಡೀ ವಿಶ್ವದ ಜನರನ್ನು ತನ್ನತ್ತ ಸೆಳೆಯುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ