ಚಾಮರಾಜನಗರ: ಅಂಬೇಡ್ಕರ್ ಭಾವ ಚಿತ್ರದ ಫ್ಲೆಕ್ಸ್ ಹರಿದು, ಬುದ್ಧನ ವಿಗ್ರಹ ಧ್ವಂಸಗೊಳಿಸಿದ ಕಿಡಿಗೇಡಿಗಳು - Mahanayaka
8:23 AM Tuesday 18 - November 2025

ಚಾಮರಾಜನಗರ: ಅಂಬೇಡ್ಕರ್ ಭಾವ ಚಿತ್ರದ ಫ್ಲೆಕ್ಸ್ ಹರಿದು, ಬುದ್ಧನ ವಿಗ್ರಹ ಧ್ವಂಸಗೊಳಿಸಿದ ಕಿಡಿಗೇಡಿಗಳು

chamarajanagara
25/10/2025

ಚಾಮರಾಜನಗರ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರವಿರುವ ಫ್ಲೆಕ್ಸ್ ಹಾಗೂ ಬೋರ್ಡ್ ನ್ನು ವಿರೂಪಗೊಳಿಸಿ, ಬುದ್ಧನ ವಿಗ್ರಹ ಧ್ವಂಸಗೊಳಿಸಿದ ಘಟನೆ  ಜ್ಯೋತಿಗೌಡನಪುರ ಗ್ರಾಮದಲ್ಲಿ ನಡೆದಿದೆ.

ಜ್ಯೋತಿಗೌಡನಪುರ ಗ್ರಾಮದಲ್ಲಿ ಪರಿಶಿಷ್ಟರ ಹಳೆ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಅಂಬೇಡ್ಕರ್ ಭಾವ ಚಿತ್ರವಿರುವ ಫ್ಲೆಕ್ಸ್ ನ್ನು ಹರಿದು, ಬುದ್ಧ ಮಂದಿರದೊಳಗಿದ್ದ ವಿಗ್ರಹವನ್ನು ಒಡೆದು ಹಾಕಿ ಹೊರಗೆ ಎಸೆಯಲಾಗಿದೆ.

ಸ್ಥಳಕ್ಕೆ ಎಸ್ ಪಿ ಡಾ.ಬಿ.ಟಿ.ಕವಿತಾ, ಚಾಮರಾಜನಗರ ಪೂರ್ವ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ಆರೋಪಿಗಳ ಸುಳಿವು ಲಭ್ಯವಾಗಿದೆ, ಶೀಘ್ರವೇ ಬಂಧಿಸುವುದಾಗಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸಂಸದ ಸುನೀಲ್ ಬೋಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ