ಉತ್ತರಪ್ರದೇಶದಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆ: ಅಭ್ಯರ್ಥಿಯ ಬದಲಿಗೆ ಅಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದ ವ್ಯಕ್ತಿಯ ಬಂಧನ

ಉತ್ತರ ಪ್ರದೇಶದ ಗೊಂಡಾದಲ್ಲಿ ಅಭ್ಯರ್ಥಿಯ ಬದಲಿಗೆ ವ್ಯಕ್ತಿಯೊಬ್ಬ ಪೊಲೀಸ್ ನೇಮಕಾತಿ ಪರೀಕ್ಷೆ ಬರೆಯುತ್ತಿರುವುದು ಕಂಡುಬಂದ ನಂತರ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಭ್ಯರ್ಥಿಯಂತೆ ನಟಿಸುತ್ತಿದ್ದ ವ್ಯಕ್ತಿಗೆ ಪರೀಕ್ಷೆ ಬರೆಯಲು 6 ಲಕ್ಷ ರೂಪಾಯಿ ನೀಡಲಾಯಿತು.
ಬಂಧಿತರನ್ನು ಕುಂದನ್ ಕುಮಾರ್ ಚೌಧರಿ, ತನ್ಮಯ್ ಸಿಂಗ್ ಮತ್ತು ಹರ್ವಿಂದರ್ ಎಂದು ಗುರುತಿಸಲಾಗಿದೆ. ತನ್ಮಯ್ ಮತ್ತು ಹರ್ವಿಂದರ್ ತಮ್ಮ ಸ್ಥಾನದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಕುಂದನ್ ಕುಮಾರ್ ಅವರನ್ನು ನೇಮಿಸಿಕೊಂಡಿದ್ದರು.
ಫೆಬ್ರವರಿ 17 ರ ಶನಿವಾರ ಎರಡನೇ ಶಿಫ್ಟ್ ಪರೀಕ್ಷೆಯ ಸಮಯದಲ್ಲಿ ಕುಂದನ್ ಕುಮಾರ್ ಅವರನ್ನು ಗೊಂಡಾದ ಪರೀಕ್ಷಾ ಕೇಂದ್ರದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ. ಅವರು ತನ್ಮಯ್ ಸಿಂಗ್ ಅವರ ಸ್ಥಾನದಲ್ಲಿ ಪರೀಕ್ಷೆ ಬರೆಯುತ್ತಿದ್ದರು ಮತ್ತು ಹರ್ವಿಂದರ್ ಗಾಗಿ ಭಾನುವಾರ ಅದೇ ರೀತಿ ಅಕ್ರಮವಾಗಿ ಪರೀಕ್ಷೆ ಬರೆಯಲು ಪ್ಲ್ಯಾನ್ ಮಾಡಿದ್ದರು ಎಂದರು.
ಕುಂದನ್ ಕುಮಾರ್ ಬಿಹಾರದ ನಳಂದ ಜಿಲ್ಲೆಯವರಾಗಿದ್ದರೆ, ತನ್ಮಯ್ ಸಿಂಗ್ ಮತ್ತು ಹರ್ವಿಂದರ್ ಗೊಂಡಾ ನಿವಾಸಿಗಳು.
ಮೂವರ ವಿರುದ್ಧ ನವಾಬ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರಿಂದ ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.