ಬ್ರೇಕಿಂಗ್ ನ್ಯೂಸ್:  ಮೂವರು ಬಿಜೆಪಿ ಕಾರ್ಯಕರ್ತರನ್ನು ಗುಂಡುಕ್ಕಿ ಹತ್ಯೆ ಮಾಡಿದ ಭಯೋತ್ಪಾದಕರು - Mahanayaka
11:26 PM Saturday 24 - January 2026

ಬ್ರೇಕಿಂಗ್ ನ್ಯೂಸ್:  ಮೂವರು ಬಿಜೆಪಿ ಕಾರ್ಯಕರ್ತರನ್ನು ಗುಂಡುಕ್ಕಿ ಹತ್ಯೆ ಮಾಡಿದ ಭಯೋತ್ಪಾದಕರು

30/10/2020

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಮುಸ್ಲಿಮ್ ಬಿಜೆಪಿ ಕಾರ್ಯಕರ್ತರನ್ನು ಭಯೋತ್ಪಾದಕರು ಹತ್ಯೆ ಗೈದಿರುವ ಘಟನೆ ನಡೆದಿದ್ದು, ಇಲ್ಲಿನ ವೈಕೆ ಪುರ ಪ್ರದೇಶದಲ್ಲಿ ಭಯೋತ್ಪಾಕರು ಬಿಜೆಪಿ ಕಾರ್ಯಕರ್ತರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದಾರೆ.


ಇಂದು ಕಲ್ಸಮ್ ಗ್ರಾಮದ ವೈಕೆ ಪುರ ಪೊಲೀಸರು ಈ ಘಟನೆಯ ಬಗ್ಗೆ ಮಾಹಿತಿ ದೊರೆತ ಬಳಿಕ ಸ್ಥಳಕ್ಕೆ ಧಾವಿಸಿ ಹೇಳಿಕೆಗಳನ್ನು ಪಡೆದಿದ್ದಾರೆ. ಬಿಜೆಪಿ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ  ಫಿಡಾ ಹುಸೇನ್ ಯಾತೂ, ಬಿಜೆಪಿ ಕಾರ್ಯಕರ್ತರಾದ ಉಮರ್ ರಶೀದ್ ಬೀಗ್, ಉಮರ್ ರಂಜಾನ್ ಹಜಮ್ ಭಯೋತ್ಪಾದಕರ ಗುಂಡಿಗೆ ಬಲಿಯಾದವರು. ಗುಂಡಿನ ದಾಳಿ ನಡೆದ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರಿಗೆ ಪ್ರಾಥಮಿಕ ವರದಿ ದೊರೆತಿದೆ.


ಇನ್ನೂ ಈ ಘಟನೆಯನ್ನು ಬಿಜೆಪಿಯ ಮುಸ್ಲಿಮ್ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಭಯಾನಕ ಘಟನೆ, ಈ ಘಟನೆಯನ್ನು ನಾನು ನಿಸ್ಸಂದೇಹವಾಗಿ ಖಂಡಿಸುತ್ತೇನೆ. ಅಲ್ಲಾಹನು ಅವರಿಗೆ ಜನ್ನತ್ ನೀಡಲಿ. ಇಂತಹ ಸಂದರ್ಭದಲ್ಲಿ ಮೃತರ ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿ ಸಿಗಲಿ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.


ಇತ್ತೀಚಿನ ಸುದ್ದಿ