ಬಿಎಸ್ ಪಿಯ 7 ಶಾಸಕರನ್ನು ಉಚ್ಛಾಟಿಸಿದ ಮಾಯಾವತಿ - Mahanayaka

ಬಿಎಸ್ ಪಿಯ 7 ಶಾಸಕರನ್ನು ಉಚ್ಛಾಟಿಸಿದ ಮಾಯಾವತಿ

29/10/2020

ಲಕ್ನೋ: ಪಕ್ಷ ವಿರೋಧಿ ಚಟುವಟಿಕೆ  ಹಿನ್ನೆಲೆಯಲ್ಲಿ ಬಿಎಸ್ ಪಿಯ 7 ಶಾಸಕರನ್ನು ಬಿಎಸ್ ಪಿ ವರಿಷ್ಠೆ ಮಾಯಾವತಿ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.


 ಶಾಸಕರಾದಂತ ಚೌಧುರಿ ಅಸ್ಲಂ ಆಲಿ, ಹಕೀಂ ಲಾಲ್ ಬಿಂಡ್, ಮಹ್ಮದ್ ಮುಜ್ತಾಬ್ ಸಿದ್ದೀಕಿ, ಅಸ್ಲಂ ರೈನಿ, ಸುಷ್ಮಾ ಪಟೇಲ್, ಹರ ಗೋವಿಂದ್ ಭಾರ್ಗವ್ ಹಾಗೂ ಬಂದನಾ ಸಿಂಗ್ ಅವರನ್ನು ಮಾಯಾವತಿ ಉಚ್ಛಾಟನೆ ಮಾಡಿದ್ದಾರೆ.


ರಾಜ್ಯ ಸಭಾ ಚುನಾವಣೆಗೆ ಬಿಎಸ್ ಪಿ ಘೋಷಿಸಿದ್ದ ಅಭ್ಯರ್ಥಿ ರಾಮ್ ಜಿ ಗೌತಮ್ ಅವರನ್ನು ವಿರೋಧಿಸಿದ್ದ ಪಕ್ಷದ ಶಾಸಕರನ್ನು ಮಾಯಾವತಿ ಉಚ್ಛಾಟನೆ ಮಾಡಿದ್ದಾರೆ.  ಈ ಶಾಸಕರು ಎಸ್ ಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.Provided by

ಇತ್ತೀಚಿನ ಸುದ್ದಿ