‘ಆದಿವಾಸಿಗಳಾದ ನಾವು ಹಿಂದೂಗಳಲ್ಲ’ ಎಂದು ಭಾಷಣ ಮಾಡಿದ ಶಿಕ್ಷಕಿ ಸಸ್ಪೆಂಡ್
ಆದಿವಾಸಿಗಳಾದ ನಾವು ಹಿಂದೂಗಳಲ್ಲ. ಆದಿವಾಸಿ ಮಹಿಳೆಯರು ತಾಲಿ ಮತ್ತು ಸಿಂಧೂರವನ್ನು ಧರಿಸಬೇಕಾಗಿಲ್ಲ ಎಂದು ಭಾಷಣ ಮಾಡಿದ ಶಿಕ್ಷಕಿಯನ್ನು ಸಸ್ಪೆಂಡ್ ಮಾಡಲಾಗಿದೆ. ರಾಜಸ್ಥಾನದ ಮನೇಕಾ ದಾಮೋರ್ ಎಂಬ ಶಿಕ್ಷಕಿಗೆ ಈ ಶಿಕ್ಷೆ ಲಭಿಸಿದೆ. ಅಶಿಸ್ತಿನ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಜುಲೈ 19ರಂದು ಬನ್ಸ್ವಾರದ ಮಂಗರ್ ದಾಂನಲ್ಲಿ ನಡೆದ ಮೆಗಾ ಸಮಾವೇಶದಲ್ಲಿ ಅವರು ಈ ಭಾಷಣ ಮಾಡಿದ್ದರು.
ಪೂಜಾರಿಗಳು ಏನು ಹೇಳ್ತಾರೋ ಅದನ್ನು ಆದಿವಾಸಿ ಮಹಿಳೆಯರು ಕಿವಿಗೆ ಹಾಕಿಕೊಳ್ಳಬಾರದು. ಆದಿವಾಸಿ ಕುಟುಂಬಗಳು ತಾಳಿಯನ್ನು ಧರಿಸಬಾರದು. ಸಿಂಧೂರ ಹಾಕಬಾರದು. ಮಹಿಳೆಯರು ಮತ್ತು ಮಕ್ಕಳು ಶಿಕ್ಷಣದ ಕಡೆಗೆ ಗಮನಹರಿಸಬೇಕು. ಇವತ್ತಿನಿಂದ ವ್ರತಾನುಷ್ಟಾನಗಳನ್ನು ನಿಲ್ಲಿಸಬೇಕು, ನಾವು ಹಿಂದೂಗಳಲ್ಲ ಎಂದವರು ಹೇಳಿದ್ದರು. ಇವರು ಆದಿವಾಸಿ ಪರಿವಾರ ಸಂಸ್ಥೆಯ ಸ್ಥಾಪಕಿಯಾಗಿದ್ದಾರೆ ಈ ಶಿಕ್ಷಕಿ. ಈ ಸಮಾವೇಶದಲ್ಲಿ ರಾಜಸ್ಥಾನ ಮಧ್ಯಪ್ರದೇಶ ಗುಜರಾತ್ ಮಹಾರಾಷ್ಟ್ರದಿಂದ ಸಾವಿರಾರು ಆದಿವಾಸಿಗಳು ಸೇರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth