ಏರ್ ಫೈಬರ್ ಹೊಸ ಗ್ರಾಹಕರಿಗೆ ‘ಫ್ರೀಡಂ ಆಫರ್’ನಲ್ಲಿ ಶೇ 30ರಷ್ಟು ರಿಯಾಯಿತಿ ಘೋಷಿಸಿದ ಜಿಯೋ - Mahanayaka
6:32 AM Saturday 14 - September 2024

ಏರ್ ಫೈಬರ್ ಹೊಸ ಗ್ರಾಹಕರಿಗೆ ‘ಫ್ರೀಡಂ ಆಫರ್’ನಲ್ಲಿ ಶೇ 30ರಷ್ಟು ರಿಯಾಯಿತಿ ಘೋಷಿಸಿದ ಜಿಯೋ

jio
26/07/2024

ಮುಂಬೈ: ಜಿಯೋದಿಂದ ಏರ್ ಫೈಬರ್ ಹೊಸ ಗ್ರಾಹಕರಿಗೆ “ಫ್ರೀಡಂ ಆಫರ್” ಶೇಕಡಾ 30ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ. ಅಂದಹಾಗೆ ಜಿಯೋಫೈಬರ್ ಅಥವಾ ಏರ್ ಫೈಬರ್ ಎಂಬುದು ದೇಶದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಮತ್ತು ಅತಿ ದೊಡ್ಡದಾದ ಗೃಹ ಬ್ರಾಡ್ ಬ್ಯಾಂಡ್ ಹಾಗೂ ಮನರಂಜನಾ ಸೇವೆಯನ್ನು ಒದಗಿಸುತ್ತಿರುವ ಸಂಸ್ಥೆಯಾಗಿದೆ.

1.2 ಕೋಟಿ ಮನೆಗಳೊಂದಿಗೆ ಜಿಯೋಫೈಬರ್ ಅಥವಾ ಏರ್ ಫೈಬರ್ ಎಂಬುದು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಭಾರತೀಯರ ಮನೆಗಳನ್ನು ಇನ್ನಷ್ಟು ವೇಗವಾಗಿ ಡಿಜಿಟೈಸ್ ಮಾಡುವ ಉದ್ದೇಶದಿಂದ ಮತ್ತು ಭಾರತವನ್ನು  ಡಿಜಿಟಲ್ ಸಮುದಾಯವಾಗಿ ಮಾರ್ಪಡಿಸುವ ಉದ್ದೇಶದಿಂದ ಜಿಯೋದಿಂದ ಈ ಭರವಸೆಯ ಕೊಡುಗೆಯನ್ನು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಇನ್ನಷ್ಟು ಮನೆಗಳಲ್ಲಿ ಈ ಸಂಪರ್ಕ ಪಡೆಯುವುದಕ್ಕೆ ಉತ್ತೇಜನ ದೊರೆಯುತ್ತದೆ. ಈಗಾಗಲೇ ಕೈಗೆಟುಕುವ ಬೆಲೆಯಲ್ಲಿ ಇರುವ ಜಿಯೋಏರ್ ಫೈಬರ್ ಪ್ಲಾನ್ ಗಳ ಜೊತೆಗೆ ಶೇಕಡಾ 30ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಫ್ರೀಡಂ ಆಫರ್ ಜೊತೆಗೆ ಹೊಸ ಜಿಯೋಏರ್ ಫೈಬರ್ ಬಳಕೆದಾರರು ಶೇ 30ರಷ್ಟು ರಿಯಾಯಿತಿಯನ್ನು ಹೊಸ ಸಂಪರ್ಕವನ್ನು 1000 ರೂಪಾಯಿಯ ಇನ್ ಸ್ಟಲೇಷನ್ ಶುಲ್ಕದ ಮನ್ನಾದ ಮೂಲಕ ಪಡೆಯುತ್ತಾರೆ. ಇದು ಸೀಮಿತ ಅವಧಿಯ ಕೊಡುಗೆ ಆಗಿದ್ದು, ಜುಲೈ 26ರಿಂದ ಆಗಸ್ಟ್ 15ನೇ ತಾರೀಕಿನ ಮಧ್ಯೆ ಇರುತ್ತದೆ.

ಇನ್ನು ಜಿಯೋಏರ್ ಫೈಬರ್ ಸಂಪರ್ಕ ಪಡೆಯುವುದು ಹೇಗೆ ಎಂಬ ಪ್ರಶ್ನೆ ಇದೆಯಾ? ಅದು ಬಹಳ ಸರಳ. Jio.com ವೆಬ್ ಸೈಟ್ ಗೆ ಭೇಟಿ ನೀಡಿ ಮತ್ತು ನಿಮಗಿರುವ ಆಸಕ್ತಿಯನ್ನು ತಿಳಿಸಿ ಅಥವಾ 60008-60008 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ. ಜಿಯೋದಿಂದ ಸ್ಥಿರ ನಿಸ್ತಂತು (ವೈರ್ ಲೆಸ್) ಕೊಡುಗೆ ಏರ್ ಫೈಬರ್ ಅನ್ನು ಕಳೆದ ವರ್ಷ ಗಣೇಶ ಚತುರ್ಥಿಗೆ ಪರಿಚಯಿಸಲಾಯಿತು.


Provided by

ಜಿಯೋದಿಂದ 5ಜಿ ಸ್ಟ್ಯಾಂಡ್ ಅಲೋನ್ ಸಂಪರ್ಕ ಸೇವೆಗಳನ್ನು ನಿಯೋಜಿಸಲಾಗಿದೆ.  5ಜಿ ಸ್ಥಿರ ನಿಸ್ತಂತು ಸಂಪರ್ಕವನ್ನು ಒದಗಿಸುವುದಕ್ಕೆ ಮೀಸಲಿಟ್ಟ ನೆಟ್ ವರ್ಕ್ ಬಳಕೆ ಮಾಡುತ್ತಿದೆ. ನೆಟ್ ವರ್ಕ್ ಇಕ್ಕಟ್ಟಾಗುವುದನ್ನು ನಿರ್ವಹಿಸುವುದಕ್ಕೆ ಇದರಿಂದ ಸಹಾಯ ಆಗುತ್ತದೆ. ಆದರೂ ಏರ್ ಫೈಬರ್ ನ ಸರಾಸರಿ ಬಳಕೆದಾರರು ಒಂದು ತಿಂಗಳಿಗೆ 400 ಜಿಬಿ ಡೇಟಾ ಬಳಸುತ್ತಾರೆ.

ಏನಿದು ಜಿಯೋಏರ್ ಫೈಬರ್?

ಯಾವುದೇ ತಂತಿ ಇಲ್ಲದೆ ಫೈಬರ್ ರೀತಿ ವೇಗವನ್ನು ಗಾಳಿಯ ಮೂಲಕವೇ ಒದಗಿಸುತ್ತದೆ ಏರ್ ಫೈಬರ್. ಬಳಕೆದಾರರು ಪ್ಲಗ್ ಹಾಕಿ, ಆನ್ ಮಾಡಿದರೆ ಆಯಿತು. ಇಷ್ಟು ಮಾಡಿದಲ್ಲಿ ತಮ್ಮ ಮನೆಯಲ್ಲಿ ವೈಯಕ್ತಿಕವಾ ಹಾಟ್ ಸ್ಪಾಟ್ ಅನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಂತಾಗುತ್ತದೆ.

ಜಿಯೋಫೈಬರ್ ಸ್ಥಿರ ನಿಸ್ತಂತು ಸಂಪರ್ಕ ಪರಿಹಾರವಾಗಿದ್ದು, ಇದರಿಂದ ಯಾವುದೇ ಅಡೆತಡೆಯಿಲ್ಲದೆ 1 ಜಿಬಿಪಿಎಸ್ ತನಕದ ಹೈ- ಸ್ಪೀಡ್ ಸಂಪರ್ಕ ಮನೆ ಮತ್ತು ಕಚೇರಿಗಳಿಗೆ ದೊರೆಯುತ್ತದೆ . ಏಕಕಾಲಕ್ಕೆ ಹಲವು ಸಾಧನಗಳನ್ನು ಬಳಸಬಹುದು. ಸ್ಮಾರ್ಟ್ ಫೋನ್, ಪರ್ಸನಲ್ ಕಂಪ್ಯೂಟರ್ ಗಳು, ಟ್ಯಾಬ್ಲೆಟ್, ಸ್ಮಾರ್ಟ್ ಟೀವಿಗಳು, ಮತ್ತು ಇದರ ಜತೆಗೆ ಸೆಟ್ ಟಾಪ್ ಬಾಕ್ಸ್ ಗಳನ್ನು ಸಹ ಏಕಕಾಲಕ್ಕೆ ಸಂಪರ್ಕ ಕೊಡಬಹುದು, ಅದು ಕೂಡ ಇಂಟರ್ ನೆಟ್ ವೇಗದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಂತೆ ಸಾಧ್ಯವಾಗುತ್ತದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ