ಪುಲ್ವಾಮಾ ದಾಳಿ ನಡೆಸಿದ್ದು ನಾವೇ ಎಂದು ಒಪ್ಪಿಕೊಂಡ ಪಾಕ್ ಸಂಸದ - Mahanayaka

ಪುಲ್ವಾಮಾ ದಾಳಿ ನಡೆಸಿದ್ದು ನಾವೇ ಎಂದು ಒಪ್ಪಿಕೊಂಡ ಪಾಕ್ ಸಂಸದ

29/10/2020

ಇಸ್ಲಮಾಬಾದ್: ಪುಲ್ವಾಮಾ ದಾಳಿಯ ವಿಚಾರವಾಗಿ ಪಾಕಿಸ್ತಾನ ಸಂಸದ ಸಂಸತ್ ನಲ್ಲಿ ಮಾತನಾಡುತ್ತಾ, ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ಪುಲ್ವಾಮಾ ದಾಳಿ ದೊಡ್ಡ ಸಾಧನೆ ಎಂದು ಕೊಂಡಾಡಿದ್ದಾನೆ.
 

ಪಾಕಿಸ್ತಾನ ಸಚಿವ, ಪವಾರ್ ಚೌಧರಿ ಈ ಹೇಳಿಕೆ ನೀಡಿದ್ದಾನೆ. 2019 ಫೆಬ್ರವರಿ 14ರಂದು ಜಮ್ಮ-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾರತದ 30 ಸೈನಿಕರು ಹುತಾತ್ಮರಾಗಿದ್ದರು. ಈ ದಾಳಿಯನ್ನು ಇಮ್ರಾನ್ ಖಾನ್ ನೇತೃತದ ಪಾಕಿಸ್ತಾನ ಸರ್ಕಾರವು ನಡೆಸಿದೆ ಎಂದು ಪಾಕಿಸ್ತಾನ ಸಚಿವನೇ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಒಪ್ಪಿಕೊಂಡಿದ್ದಾನೆ.


ನಾವು ಭಾರತದ ನೆಲದಲ್ಲೇ ಹೊಡೆದವು ಪುಲ್ವಾಮದಲ್ಲಿನ ನಮ್ಮ ಯಶಸ್ಸು, ಪ್ರಧಾನಿ ಇಮ್ರಾನ್ ಖಾನ್ ನಾಯಕತ್ವದ ಅಡಿಯಲ್ಲಿರುವ ಜನರ ಯಶಸ್ಸಾಗಿದೆ ಎಂದು ಸಚಿವ ಹೇಳಿದ್ದಾನೆ.


ಇತ್ತೀಚಿನ ಸುದ್ದಿ