ಗಡಿಜಿಲ್ಲೆಯಲ್ಲಿ 3 ದಿನ ಗುಡುಗು ಸಹಿತ ಮಳೆ: ಹವಾಮಾನ ತಜ್ಞರಿಂದ ರೈತರಿಗೆ ಈ ಸಲಹೆ - Mahanayaka
10:57 AM Friday 14 - November 2025

ಗಡಿಜಿಲ್ಲೆಯಲ್ಲಿ 3 ದಿನ ಗುಡುಗು ಸಹಿತ ಮಳೆ: ಹವಾಮಾನ ತಜ್ಞರಿಂದ ರೈತರಿಗೆ ಈ ಸಲಹೆ

rain
21/11/2023

ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರ ಜಿಲ್ಲೆಯಲ್ಲಿ ಗುಡುಗು ಸಹಿತ 3 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ಘಟಕ ಮಾಹಿತಿ ನೀಡಿದೆ.

ಚಾಮರಾಜನಗರ ಜಿಲ್ಲೆಯ ಹಲವು ಭಾಗಗಳಲ್ಲಿ ನ.22 ರಿಂದ 25 ರವರೆಗೆ ಗುಡುಗು ಮಿಂಚು ಸಹಿತ ಸಾಮಾನ್ಯ ಮಳೆ  ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮಳೆ ಬೀಳುವ ಹಿನ್ನೆಲೆಯಲ್ಲಿ  ನ.22 ರಿಂದ 25 ರವರೆಗಿನ  ಅವಧಿಯಲ್ಲಿ ಬೆಳೆಗಳಿಗೆ  ಔಷಧಿ ಸಿಂಪಡಣೆ, ಕೊಯ್ಲು, ಗೊಬ್ಬರ ಹಾಕುವುದನ್ನು ರೈತರು ಮುಂದೂಡುವುದು ಸೂಕ್ತ ಎಂದು ಹವಾಮಾನ ತಜ್ಞರು ರೈತರಿಗೆ ಸಲಹೆ ಕೊಟ್ಟಿದ್ದಾರೆ.

ಇತ್ತೀಚಿನ ಸುದ್ದಿ