ಒಬ್ಬನೇ ವರನನ್ನು ವಿವಾಹವಾದ ಮೂವರು ಸಹೋದರಿಯರು | ಒಂದೇ ಸಮಾರಂಭದಲ್ಲಿ ಮೂವರನ್ನು ವರಿಸಿದ ಕೃಷ್ಣ - Mahanayaka
1:20 PM Sunday 14 - September 2025

ಒಬ್ಬನೇ ವರನನ್ನು ವಿವಾಹವಾದ ಮೂವರು ಸಹೋದರಿಯರು | ಒಂದೇ ಸಮಾರಂಭದಲ್ಲಿ ಮೂವರನ್ನು ವರಿಸಿದ ಕೃಷ್ಣ

10/11/2020

ಚಿತ್ರಕೂಟ್: ಮೂವರು ಸಹೋದರಿಯರು ಒಬ್ಬನೇ ವರನನ್ನು ಮದುವೆಯಾದ ಘಟನೆ ಉತ್ತರಪ್ರದೇಶದ ಚಿತ್ರಕೂಟ್ ಜಿಲ್ಲೆಯಲ್ಲಿ ನಡೆದಿದ್ದು, ಸುಮಾರು 12 ವರ್ಷಗಳ ಹಿಂದೆ ಈ ಮದುವೆ ನಡೆದಿದ್ದು, ಈಗಲೂ ಈ ಸಹೋದರಿಯರು ತಮ್ಮ ಓರ್ವನೇ ಪತಿಯ ಜೊತೆಗೆ ಬದುಕುತ್ತಿದ್ದಾರೆ.


Provided by

ಕೃಷ್ಣ ಎಂಬಾತ ಈ ಮೂವರು ಮಡದಿಯರ ಮುದ್ದಿನ ಗಂಡನಾಗಿದ್ದಾನೆ. 12 ವರ್ಷಗಳ ಹಿಂದೆ ಈ ಮೂವರನ್ನೂ ಈತ ವರಿಸಿದ್ದ. ಶೋಭಾ, ರೀನಾ ಮತ್ತು ಪಿಂಕಿ ಈತನ ಮೂವರು ಮಡದಿಯರಾಗಿದ್ದಾರೆ.

ವಿಶೇಷ ಏನೆಂದರೆ, ಕೃಷ್ಣನ ಮೂವರು ಮಡದಿಯರು ಕೂಡ ಪದವೀಧರರಾಗಿದ್ದಾರೆ. ಮೂವರು ಮಡದಿಯರಿದ್ದರೂ ಅವರ ಮನೆಯಲ್ಲಿ ಸಾಮರಸ್ಯವಿದೆ.  ಕುಟುಂಬದಲ್ಲಿ ಈವರೆಗೆ ಯಾವುದೇ ಭಿನ್ನಭಿಪ್ರಾಯ ಕೂಡ ಬಂದಿಲ್ಲವಂತೆ.

ಕೃಷ್ಣ ಒಂದೇ ಮದುವೆ ಸಮಾರಂಭದಲ್ಲಿ ಮೂವರನ್ನು ವಿವಾಹವಾದ, ಈ ಸಂಬಂಧ ಹೆಚ್ಚು ದಿನ ಉಳಿಯುತ್ತದೆ ಎಂದು ನಾವು  ಭಾವಿಸಿರಲಿಲ್ಲ. ಆದರೆ, ಇವರು ಮದುವೆಯಾಗಿ ಈಗಾಗಲೇ 12 ವರ್ಷಗಳು ಕಳೆದಿವೆ ಎಂದು ಕೃಷ್ಣನ ಸಂಬಂಧಿಯೊಬ್ಬರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ