ಬಿಹಾರ ಚುನಾವಣೆ ಫಲಿತಾಂಶದ ಸಂದರ್ಭದಲ್ಲಿ ಜೈಲಿನಲ್ಲಿರುವ ಲಾಲು ಪ್ರಸಾದ್ ಯಾದವ್ ಏನು ಹೇಳಿದರು ಗೊತ್ತಾ? - Mahanayaka

ಬಿಹಾರ ಚುನಾವಣೆ ಫಲಿತಾಂಶದ ಸಂದರ್ಭದಲ್ಲಿ ಜೈಲಿನಲ್ಲಿರುವ ಲಾಲು ಪ್ರಸಾದ್ ಯಾದವ್ ಏನು ಹೇಳಿದರು ಗೊತ್ತಾ?

10/11/2020

ನವದೆಹಲಿ: ಬಿಹಾರ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಈಗಾಗಲೇ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ನಿನ್ನೆ ಅಂದರೆ, ನವೆಂಬರ್ 9ರಂದು ಆರ್ ಜೆಡಿ  ನಾಯಕ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರು ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಲಾಲು ಪ್ರಸಾದ್ ಯಾದವ್ ಜೈಲಿನಿಂದಲೇ ಪುತ್ರನಿಗೆ ಶುಭಾಶಯ ಕೋರಿದ್ದಾರೆ.


Provided by

ತೇಜಸ್ವಿ ಯಾದವ್ ಅವರು ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ವೇಳೆ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಯಾದವ್ ಸದ್ಯ ರಾಂಚಿ ಜೈಲಿನಲ್ಲಿದ್ದು, ಅವರು, ತೇಜಸ್ವಿ ಯಾದವ್ ಅವರ ಹುಟ್ಟುಹಬ್ಬಕ್ಕೆ ಬಿಹಾರದ ಜನತೆ ಉಡುಗೊರೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಆರ್ ಜೆಡಿ ಮೈತ್ರಿ ಕೂಟಕ್ಕೆ ಬಿಹಾರದ ಜನತೆ ಉಡುಗೊರೆ ನೀಡಲಿದ್ದಾರೆ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದರು.  ಇದೇ ಸಂದರ್ಭದಲ್ಲಿ ಎನ್ ಡಿಎ ಮೈತ್ರಿಕೂಟ ಬಿಹಾರದಲ್ಲಿ ಮುನ್ನಡೆ ಸಾಧಿಸಿದೆ. ಅಂತಿಮ ತೀರ್ಪಿಗಾಗಿ ಇಡೀ ದೇಶವೇ ಬಿಹಾರದತ್ತ ನೋಡುತ್ತಿದೆ.

ಇತ್ತೀಚಿನ ಸುದ್ದಿ