ಗಾಝಾದಲ್ಲಿ ಮತ್ತೆ ಇಸ್ರೇಲ್ ದಾಳಿ: 30 ಫೆಲೆಸ್ತೀನೀಯರ ಸಾವು, 24 ಗಂಟೆಗಳಲ್ಲಿ 266 ಸಾವು - Mahanayaka

ಗಾಝಾದಲ್ಲಿ ಮತ್ತೆ ಇಸ್ರೇಲ್ ದಾಳಿ: 30 ಫೆಲೆಸ್ತೀನೀಯರ ಸಾವು, 24 ಗಂಟೆಗಳಲ್ಲಿ 266 ಸಾವು

23/10/2023

ಗಾಝಾದ ವಸತಿ ಕಟ್ಟಡದ ಮೇಲೆ ಇಸ್ರೇಲ್ ಮತ್ತೆ ನಡೆಸಿದ ದಾಳಿಯಲ್ಲಿ ಕನಿಷ್ಠ 30 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ಮಾಧ್ಯಮಗಳು ಸೋಮವಾರ ತಿಳಿಸಿವೆ. ಈ ಕಟ್ಟಡವು ಜಬಾಲಿಯಾ ನಿರಾಶ್ರಿತರ ಶಿಬಿರದ ಅಲ್-ಶುಹಾದಾ ಪ್ರದೇಶದಲ್ಲಿದೆ. ದಾಳಿಯು ಕಟ್ಟಡವನ್ನು ನೆಲಸಮಗೊಳಿಸಿತಲ್ಲದೇ ನೆರೆಹೊರೆಯ ಹಲವಾರು ಮನೆಗಳನ್ನು ನಾಶಪಡಿಸಿತು ಎಂದು ವರದಿ ತಿಳಿಸಿದೆ. ಏತನ್ಮಧ್ಯೆ, ಗಾಝಾದ ಆರೋಗ್ಯ ಸಚಿವಾಲಯವು ಕಳೆದ 24 ಗಂಟೆಗಳಲ್ಲಿ ಇಸ್ರೇಲಿ ವಾಯು ದಾಳಿಯಲ್ಲಿ 117 ಮಕ್ಕಳು ಸೇರಿದಂತೆ 266 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಫೆಲೆಸ್ತೀನ್ ಗುಂಪು ಹಮಾಸ್ ದಕ್ಷಿಣ ಇಸ್ರೇಲಿ ಸಮುದಾಯಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ ನಂತರ ಅಕ್ಟೋಬರ್ 7 ರಂದು ಪ್ರಾರಂಭವಾದ ಇಸ್ರೇಲ್ ನ ಎರಡು ವಾರಗಳ ಬಾಂಬ್ ದಾಳಿಯಲ್ಲಿ ಕನಿಷ್ಠ 4,600 ಜನರು ಸಾವನ್ನಪ್ಪಿದ್ದಾರೆ ಎಂದು ಗಾಝಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಇಸ್ರೇಲ್-ಹಮಾಸ್ ಯುದ್ಧವು ವ್ಯಾಪಕ ಮಧ್ಯಪ್ರಾಚ್ಯ ಸಂಘರ್ಷಕ್ಕೆ ಉಲ್ಬಣಗೊಳ್ಳಬಹುದು ಎಂಬ ಆತಂಕದ ಮಧ್ಯೆ, ಇಸ್ರೇಲ್ ಕಡೆಗೆ ಟ್ಯಾಂಕ್ ವಿರೋಧಿ ಕ್ಷಿಪಣಿಗಳು ಮತ್ತು ರಾಕೆಟ್ಗಳನ್ನು ಉಡಾಯಿಸಲು ಯೋಜಿಸುತ್ತಿದ್ದ ಲೆಬನಾನ್ನಲ್ಲಿರುವ ಎರಡು ಹಿಜ್ಬುಲ್ಲಾ ಸೆಲ್ಗಳ ಮೇಲೆ ಸೋಮವಾರ ಮುಂಜಾನೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ತಿಳಿಸಿದೆ.

ಇತ್ತೀಚಿನ ಸುದ್ದಿ