13 ಲಕ್ಷ ಮೌಲ್ಯದ ನಕಲಿ ನೋಟು ಹೊಂದಿದ ಪ್ರಕರಣ: ನಾಲ್ವರಿಗೆ 5 ವರ್ಷ ಜೈಲು

ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು (ಎಫ್ಐಸಿಎನ್) ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ಎನ್ಐಎ ನ್ಯಾಯಾಲಯವು ನಾಲ್ವರು ವ್ಯಕ್ತಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸುವುದರೊಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬುಧವಾರ 2025 ರ ಮೊದಲ ಶಿಕ್ಷೆಯನ್ನು ಪ್ರಕಟಿಸಿದೆ. ಮೂಲತಃ ಜನವರಿ 2020 ರಲ್ಲಿ ದಾಖಲಾದ ಈ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ವರು ತಪ್ಪಿತಸ್ಥರು ಎಂದು ಒಪ್ಪಿಕೊಂಡಿದ್ದಾರೆ.
ಜನವರಿ 16, 2020 ರಂದು ನಾಗ್ಪುರದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ) 13.67 ಲಕ್ಷ ಮುಖಬೆಲೆಯ ನಕಲಿ ಕರೆನ್ಸಿಯನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದರು. ಮುಂದಿನ ತಿಂಗಳು ಎನ್ಐಎ ತನಿಖೆಯನ್ನು ವಹಿಸಿಕೊಂಡಿತು. ಫೆಬ್ರವರಿ 10, 2020 ರಂದು ಪ್ರಕರಣವನ್ನು ಮರು ನೋಂದಾಯಿಸಿತು.
ತೀವ್ರ ತನಿಖೆಯ ನಂತರ ಆರೋಪಿಗಳಾದ ಲಾಲು ಖಾನ್, ಮಹೇಶ್ ಬಗ್ವಾನ್, ರಣಧೀರ್ ಸಿಂಗ್ ಠಾಕೂರ್ ಮತ್ತು ರಿತೇಶ್ ರಘುವಂಶಿ ವಿರುದ್ಧ ಎನ್ಐಎ 2020 ರ ಏಪ್ರಿಲ್‌ನಲ್ಲಿ ತನ್ನ ಮೊದಲ ಚಾರ್ಜ್‌ಶೀಟ್ ಸಲ್ಲಿಸಿತ್ತು. ಐದನೇ ಆರೋಪಿಯನ್ನು ಪಶ್ಚಿಮ ಬಂಗಾಳದ ಮಾಲ್ಡಾದ ಸೊಹ್ರಾಬ್ ಹೋಸೆನ್ ಎಂದು ಗುರುತಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj