ಚಾರ್ಮಾಡಿ ಘಾಟ್ ನಲ್ಲಿ ಭಾರೀ ಗಾತ್ರದ 4 ಸತ್ತ ಹಂದಿಗಳನ್ನು ಎಸೆದ ಕಿಡಿಗೇಡಿಗಳು - Mahanayaka
4:43 AM Wednesday 22 - October 2025

ಚಾರ್ಮಾಡಿ ಘಾಟ್ ನಲ್ಲಿ ಭಾರೀ ಗಾತ್ರದ 4 ಸತ್ತ ಹಂದಿಗಳನ್ನು ಎಸೆದ ಕಿಡಿಗೇಡಿಗಳು

charmady
18/11/2022

ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್‍ನ ಮಲಯಮಾರುತ ಸಮೀಪ ಕಿಡಿಗೇಡಿಗಳು ರಸ್ತೆ ಬದಿಯಲ್ಲಿ ಹಂದಿಗಳ ಕಳೇಬರವನ್ನು ಎಸೆದು ಹೋದ ಘಟನೆ ನಡೆದಿದೆ.

ನಾಲ್ಕಕ್ಕೂ ಹೆಚ್ಚು ಭಾರೀ ಗಾತ್ರ ಹಂದಿಗಳನ್ನು ಎಸೆದು ಹೋಗಿದ್ದು, ರಸ್ತೆ ಬದಿಯಲ್ಲಿ ಎಸೆದಿರುವುದರಿಂದ ಈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.

ಸಮೀಪದಲ್ಲೆ ತೊರೆಯೊಂದು ಹರಿಯುತ್ತಿದ್ದು ಹಂದಿಯ ಕಳೇಬರ ಕೊಳೆತು ತೊರೆಯನ್ನು ಸೇರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಮಂಗಳೂರು ಕಡೆಗೆ ಹಂದಿಗಳನ್ನು ಸಾಗಾಟ ಮಾಡುವ ವಾಹನ ಚಾಲಕರು ಸತ್ತ ಹಂದಿಗಳನ್ನು ಹೀಗೆ ಎಸೆದು ಹೋಗಿರುವ ಸಾಧ್ಯತೆ ಇದ್ದು ಹೀಗೆ ಎಸೆದು ಹೋಗಿರುವವರ ವಿರುದ್ದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ