ಹಿಮಸ್ಫೋಟದಿಂದ ತಂದೆಯನ್ನು ಕಳೆದುಕೊಂಡ 4 ಹೆಣ್ಣು ಮಕ್ಕಳನ್ನು ದತ್ತು ಪಡೆದ ನಟ ಸೋನುಸೂದ್ - Mahanayaka
10:48 PM Tuesday 20 - January 2026

ಹಿಮಸ್ಫೋಟದಿಂದ ತಂದೆಯನ್ನು ಕಳೆದುಕೊಂಡ 4 ಹೆಣ್ಣು ಮಕ್ಕಳನ್ನು ದತ್ತು ಪಡೆದ ನಟ ಸೋನುಸೂದ್

24/02/2021

ಉತ್ತರಾಖಂಡ:  ಹಿಮಸ್ಫೋಟ ದುರಂತದಲ್ಲಿ ತಂದೆಯನ್ನು ಕಳೆದುಕೊಂಡ 4 ಹೆಣ್ಣು ಮಕ್ಕಳನ್ನು ನಟ ಸೋನುಸೂದ್ ದತ್ತು ಪಡೆದಿದ್ದಾರೆ.  ಉತ್ತರಾಖಂಡ್ ನ ಚಮೋಲಿ ಜಿಲ್ಲೆಯಲ್ಲಿ ಹಿಮಸ್ಫೋಟ ದುರಂತದಲ್ಲಿ  ಸಾಕಷ್ಟು ಸಂಖ್ಯೆಯಲ್ಲಿ ಪ್ರಾಣ ಹಾನಿಯಾಗಿತ್ತು.

ಪ್ರವಾಹದ ಏಟಿಗೆ  ಜಲ ವಿದ್ಯುತ್ ಯೋಜನೆ ಕಾಮಗಾರಿಯಲ್ಲಿ ತೊಡಗಿದ್ದಅಲಾಮ್ ಸಿಂಗ್ ಬಂದೀರ್ ಕೊಚ್ಚಿಕೊಂಡು ಹೋಗಿದ್ದರು. ರಕ್ಷಣಾ ಕಾರ್ಯಾಚರಣೆಯ ವೇಳೆ  ಅಲಾಮ್ ಅವರ  ಮೃತದೇಹ ಪತ್ತೆಯಾಗಿತ್ತು.

ಮನೆಯ ಆಧಾರ ಸ್ತಂಭವನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಅಲಾಮ್ ಕುಟುಂಬಕ್ಕೆ ಸೋನುಸೂದ್ ನೆರವಾಗಿದ್ದು, ನಾಲ್ವರು ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಮಕ್ಕಳ ಶಿಕ್ಷಣ ಮಾತ್ರವಲ್ಲದೇ, ಈ ಮಕ್ಕಳ ಮದುವೆ ಮಾಡಿಸುವ ಜವಾಬ್ದಾರಿಯೂ ನನ್ನದು ಎಂದು ಸೋನುಸೂದ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ