ಪಟಾಕಿ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಇನ್ನೊಂದು ಲಾರಿ | ಕೆಲವೇ ಕ್ಷಣಗಳಲ್ಲಿ ನಡೆದದ್ದೇನು ಗೊತ್ತಾ? - Mahanayaka
3:04 AM Saturday 25 - January 2025

ಪಟಾಕಿ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಇನ್ನೊಂದು ಲಾರಿ | ಕೆಲವೇ ಕ್ಷಣಗಳಲ್ಲಿ ನಡೆದದ್ದೇನು ಗೊತ್ತಾ?

24/02/2021

ಧಾರವಾಡ:  ಪಟಾಕಿ ಸಾಗಿಸುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿದ್ದು, ಇದರಿಂದ ಸಾರ್ವಜನಿಕರು ಕೆಲಕಾಲ ಆತಂಕಕ್ಕೊಳಗಾದ ಘಟನೆ ಧಾರವಾಡ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಪಟಾಕಿ ಹೊತ್ತಿದ್ದ ಲಾರಿಯೊಂದು ಧಾರವಾಡ ಬೈಪಾಸ್ ನ ಇಟ್ಟಿಗಟ್ಟಿ ಬಳಿ ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ಪಟಾಕಿಗೆ ಬೆಂಕಿ ಹತ್ತದಂತೆ ಎಚ್ಚರಿಕೆ ವಹಿಸಿದೆ.

ಶಿವಕಾಶಿಯಿಂದ ಮುಂಬೈಗೆ ಹೋಗುತ್ತಿದ್ದ ಲಾರಿಯಲ್ಲಿ  ಯಾವುದೇ ಅವಗಢ ತಡೆ ಸಲಕರಣೆಗಳಿರಲಿಲ್ಲ. ನಿಯಮಗಳನ್ನು ಉಲ್ಲಂಘಿಸಿಯೇ ಪಟಾಕಿಯನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಅಪಘಾತದ ರಭಸಕ್ಕೆ ಪಟಾಕಿಗೆ ಬೆಂಕಿ ಹತ್ತಿಕೊಂಡಿದ್ದರೆ, ಭಾರೀ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ಘಟನಾ ಸ್ಥಳಕ್ಕೆ ತಕ್ಷಣವೇ ಆಗಮಿಸಿದ ಅಗ್ನಿಶಾಮಕ ದಳವು ಕರೆಯೊಂದರ ಬಳಿ ಲಾರಿಯನ್ನು ನಿಲ್ಲಿಸಿ, ಬೆಂಕಿ ಹತ್ತಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿತು.

ಇತ್ತೀಚಿನ ಸುದ್ದಿ