ಕೋಳಿ ಕಾಳಗ ನೋಡಲು ಹೋದವನ ದುರಂತ ಅಂತ್ಯ: ಕೋಳಿಯ ಚೂರಿಗೆ ಯುವಕ ಬಲಿ - Mahanayaka

ಕೋಳಿ ಕಾಳಗ ನೋಡಲು ಹೋದವನ ದುರಂತ ಅಂತ್ಯ: ಕೋಳಿಯ ಚೂರಿಗೆ ಯುವಕ ಬಲಿ

24/02/2021

ಹೈದರಾಬಾದ್: ಕೋಳಿ ಅಂಕಕ್ಕೆ ತೆರಳಿದ್ದ ಯುವಕನೋರ್ವ ಚೂರಿ ಧರಿಸಿದ್ದ ಹುಂಜನ ದಾಳಿಗೆ ಮೃತಪಟ್ಟ ಘಟನೆ  ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ಲೋಥುನೂರು ಪ್ರದೇಶದಲ್ಲಿ ನಡೆದಿದೆ.

ತನುಗುಲ್ಲಾ ಸತೀಶ್ ಮೃತಪಟ್ಟ ಯುವಕನಾಗಿದ್ದಾನೆ. ಗ್ರಾಮದಲ್ಲಿ ಕೋಳಿ ಅಂಕ(ಕೋಳಿಗಳ ಕಾಳಗ) ಏರ್ಪಡಿಸಲಾಗಿದ್ದು,  ಇದನ್ನು ನೋಡಲು ಯುವಕ ಹೋಗಿದ್ದಾನೆ. ಕೋಳಿ ಕಾಳಗದಲ್ಲಿ ಕೋಳಿಗಳ ಕಾಲಿಗೆ 3 ಇಂಚಿನ ಚೂರಿಯನ್ನು ಕಟ್ಟಲಾಗುತ್ತದೆ. ಈ ಚೂರಿ ಬಹಳ ಅಪಾಯಕಾರಿಯಾಗಿದೆ. ಕೋಳಿಗಳು ಭೀಕರವಾಗಿ ಕಾದಾಡುತ್ತಾ, ಕಾಳಗ ನೋಡುತ್ತಿದ್ದ ಯುವಕ ಸತೀಶ್ ನ ಮೇಲೆ ಬಿದ್ದಿದೆ.

ಕೋಳಿಯ ಕಾಲಿಗೆ ಕಟ್ಟಲಾಗಿದ್ದ ಚೂರಿ ಸತೀಶ್ ನ ತೊಡೆ ಸಂದಿಗೆ ತಗಲಿದ್ದು, ಇದರಿಂದಾಗಿ ಆತ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ರಕ್ತಸ್ರಾವವಾಗಿದೆ.  ಆಸ್ಪತ್ರೆಗೆ ಆತನನ್ನು ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

ಕೋಳಿ ಅಂಕ ಕಾನೂನು ಬಾಹಿರ ಎಂದು ಘೋಷಿಸಲಾಗಿದ್ದರೂ, ವಿವಿಧ ಪ್ರದೇಶಗಳಲ್ಲಿ ಈಗಲೂ ನಡೆಯುತ್ತಿದೆ. ಕರ್ನಾಟಕದ ಕರಾವಳಿ ಭಾಗಗಳಲ್ಲಿಯೂ ಕೋಳಿ ಅಂಕ ನಡೆಯುತ್ತದೆ. ಜಾತ್ರೆಗಳು ಮುಗಿದ ಬಳಿಕ ಒಂದು ದಿನ ಕೋಳಿ ಅಂಕ ನಡೆಸುವುದು ಸಾಮಾನ್ಯವಾಗಿದೆ. ಆದರೆ ಕೋಳಿ ಅಂಕದಲ್ಲಿ ಒಂದಲ್ಲ ಒಂದು ಅಪಾಯ ಕಟ್ಟಿಟ್ಟಬುತ್ತಿಯಾಗಿದೆ.

ಇತ್ತೀಚಿನ ಸುದ್ದಿ