ಜ್ಯೂಸ್ ಕುಡಿದು ಎಸೆಯುವ ಲೋಟಕ್ಕೆ 40 ರೂ. ಬಿಲ್ ಹಾಕಿದ ರೆಸ್ಟೋರೆಂಟ್! - Mahanayaka

ಜ್ಯೂಸ್ ಕುಡಿದು ಎಸೆಯುವ ಲೋಟಕ್ಕೆ 40 ರೂ. ಬಿಲ್ ಹಾಕಿದ ರೆಸ್ಟೋರೆಂಟ್!

plastic glasses price
08/11/2024


Provided by

ಮುಂಬೈ: ರೆಸ್ಟೋರೆಂಟ್ ವೊಂದು ಜ್ಯೂಸ್ ಕುಡಿಯುವ ಪ್ಲಾಸ್ಟಿಕ್ ಲೋಟಕ್ಕೂ 40 ರೂಪಾಯಿ ಬಿಲ್ ಹಾಕಿರುವ ಘಟನೆ ನಡೆದಿದ್ದು, ಹೊಟೇಲ್ ನ ಈ ಬಿಲ್ ನ್ನು ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈನ ಥಾಣೆಯ ವಿವಿಯನ್ ಮಾಲ್ ನಲ್ಲಿರುವ ಶಾಹಿ ದರ್ಬಾರ್ ರೆಸ್ಟೋರೆಂಟ್ ನಲ್ಲಿ ಈ ಘಟನೆ ನಡೆದಿದೆ. ಜ್ಯೂಸ್ ಕುಡಿದ ಮೇಲೆ ಬಿಸಾಡುವಂತಹ ಪ್ಲಾಸ್ಟಿಕ್ ಗ್ಲಾಸ್‌ಗೆ 40 ರೂ. ಚಾರ್ಜ್ ಮಾಡುವವರಿದ್ದಾರೆಯೇ? ಮುಂಬೈ ತುಂಬಾ ದುಬಾರಿ ಎಂದು ಗೊತ್ತಿತ್ತು, ಆದ್ರೆ ಹೀಗೆ ಅನ್ನೋ ವಿಚಾರ ಗೊತ್ತಿರಲಿಲ್ಲ ಎಂಬ ಶೀರ್ಷಿಕೆಯೊಂದಿಗೆ ಹೊಟೇಲ್ ನ ಬಿಲ್ ನ್ನು ಗ್ರಾಹಕ ಶೇರ್ ಮಾಡಿಕೊಂಡಿದ್ದಾರೆ.

ಮುಂಬೈ ನಿವಾಸಿ ರವಿ ಹಾಂಡಾ ಎಂಬವರು ಈ ಬಿಲ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಬಿಲ್ ಇದೀಗ ವೈರಲ್ ಆಗಿದೆ. ಒಂದು ಮ್ಯಾಂಗೋ ಜ್ಯೂಸ್ ಗೆ 250 ರಂತೆ ಹಾಗೂ ಜ್ಯೂಸ್ ಕುಡಿದು ಬಿಸಾಡುವ ಪ್ಲಾಸ್ಟಿಕ್ ಲೋಟಕ್ಕೆ ಒಂದಕ್ಕೆ 40 ರೂ. ನಂತೆ ಜಾರ್ಚ್ ಮಾಡಲಾಗಿದ್ದು, ಈ ಫೋಟೋ ನೋಡಿ ಜನರು ಇದು ವ್ಯವಹಾರವಲ್ಲ, ಲೂಟಿ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ