ಸಮೋಸ ತಿಂದ ಮಗು ಅಸ್ವಸ್ಥ: ಸಮೋಸದಲ್ಲಿ ಹಲ್ಲಿಯ ಬಾಲ ಕಂಡು ಬೆಚ್ಚಿ ಬಿದ್ದ ಪೋಷಕರು - Mahanayaka

ಸಮೋಸ ತಿಂದ ಮಗು ಅಸ್ವಸ್ಥ: ಸಮೋಸದಲ್ಲಿ ಹಲ್ಲಿಯ ಬಾಲ ಕಂಡು ಬೆಚ್ಚಿ ಬಿದ್ದ ಪೋಷಕರು

samosa
08/11/2024

ರೇವಾ: ಸಮೋಸದಲ್ಲಿ ಹಲ್ಲಿ ಇರುವುದನ್ನು ಗಮನಿಸದೇ ತಿಂದ ಐದು ವರ್ಷದ ಮಗು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ನಿಪಾನಿಯಾ ಪ್ರದೇಶದಲ್ಲಿ ನಡೆದಿದೆ.

ಮಗುವಿನ ತಂದೆ ಪಂಕಜ್ ಶರ್ಮಾ ತನ್ನ ಪತ್ನಿಗೆ ಚಿಕಿತ್ಸೆ ಕೊಡಿಸಿ ತನ್ನ ಸ್ನೇಹಿತನೊಂದಿಗೆ ಮನೆಗೆ ಮರಳುತ್ತಿದ್ದರು. ದಾರಿಯಲ್ಲಿ ಕಂಡು ಬಂದ ಅಂಗಡಿಯಿಂದ ಸಮೋಸ ಹಾಗೂ ಜಿಲೇಬಿ ಖರೀದಿಸಿದ್ದರು.

ಮನೆಗೆ ಬಂದ ಬಳಿಕ ಮಗುವಿಗೆ ಸಮೋಸ ನೀಡಲಾಗಿದೆ. ಮಗು ಸಮೋಸವನ್ನು ಅರ್ಧ ತಿಂದಿದ್ದು, ಬಳಿಕ ವಿಚಿತ್ರವಾಗಿ ವರ್ತನೆ ತೋರಿದೆ. ಉಳಿದ ಸಮೋಸ ಮಗುವಿನ ಕೈ ಜಾರಿ ಕೆಳಗೆ ಬಿದ್ದಿದ್ದು, ಮಗುವಿನ ಆರೋಗ್ಯ ಹದಗೆಟ್ಟಿದೆ.

ಈ ವೇಳೆ ತಂದೆ ಅನುಮಾನಗೊಂಡು ಕೆಳಗೆ ಬಿದ್ದಿದ್ದ ಸಮೋಸವನ್ನು ಪರಿಶೀಲಿಸಿದಾಗ ಸಮೋಸದಲ್ಲಿ ಹಲ್ಲಿಯ ಬಾಲ ಪತ್ತೆಯಾಗಿದೆ. ಇದರಿಂದ ಹೆದರಿದ ಪೋಷಕರು ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮಾರ್ಗ ಮಧ್ಯದಲ್ಲಿ ಮಗುವಿನ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಬಳಿಕ ಕುಟುಂಬಸ್ಥರು ಮಗುವನ್ನು ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿಗೆ ಸದ್ಯ ಚಿಕಿತ್ಸೆ ನಡೆಯುತ್ತಿದೆ. ಮಗು ಅಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.

ಆಹಾರಗಳನ್ನು ತೆರೆದು ತಿನ್ನಿ:

ಅಂಗಡಿಗಳಲ್ಲಿ ನಾವು ಖರೀದಿಸುವ ಆಹಾರ ವಸ್ತುಗಳು ಸುರಕ್ಷಿತ ಎಂದು ಹೇಳಲು ಕಷ್ಟ. ಹಾಗಾಗಿ ಸಮೋಸದಂತಹ ಯಾವುದೇ ಮುಚ್ಚಿದ ಸ್ಥಿತಿಯಲ್ಲಿರುವ ಆಹಾರ ವಸ್ತುಗಳನ್ನು ತೆರೆದು ಪರಿಶೀಲಿಸಿ ತಿನ್ನುವುದು ಉತ್ತಮ. ಆಹಾರ ಸುರಕ್ಷತೆ ಸದ್ಯ ಸವಾಲಿನ ಕೆಲಸವಾಗುತ್ತಿದೆ. ಹೀಗಾಗಿ ಸಾರ್ವಜನಿಕರೇ ಎಚ್ಚೆತ್ತುಕೊಂಡರೆ, ಇಂತಹ ಘಟನೆಗಳಿಗೆ ಕಡಿವಾಣ ಬೀಳಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ