ಸ್ಯಾನಿಟೈಸರ್ ಮಿಶ್ರಿತ ಮದ್ಯ ಸೇವಿಸಿ ಐವರ ದಾರುಣ ಸಾವು | ಬುಡಕಟ್ಟು ಸಮುದಾಯದ ಕಾಲೋನಿಯಲ್ಲಿ ಮಡುಗಟ್ಟಿದ ಶೋಕ
20/10/2020
ಪಾಲಕ್ಕಾಡ್: ಸ್ಯಾನಿಟೈಸರ್ ಮಿಶ್ರಣ ಮಾಡಿದ್ದ ಮದ್ಯವನ್ನು ಸೇವಿಸಿ ಐವರು ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಪಾಲಕ್ಕಾಡ್ ಕಾಂಜಿ ಕೋಡ್ ನ ಚೆಲ್ಲನಕಾವು ಬುಡಕಟ್ಟು ಸಮುದಾಯದ ಕಾಲೋನಿಯಲ್ಲಿ ನಡೆದಿದೆ.
ರಾಮನ್(52), ಅಯ್ಯಪ್ಪನ್(55) ಆತನ ಮಗ ಅರುಣ್(22), ಶಿವನ್(45) ಮತ್ತು ಆತನ ಸಹೋದರ ಮೂರ್ತಿ(33) ಮೃತಪಟ್ಟವರಾಗಿದ್ದಾರೆ. ಸದ್ಯ ಮೂವರು ಮಹಿಳೆಯರು ಸೇರಿದಂತೆ 9 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಇವರು ಸೇವಿಸಿರುವ ಮದ್ಯದಲ್ಲಿ ಸ್ಯಾನಿಟೈಸರ್ ಮಿಶ್ರಣವಾಗಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ. ಭಾನುವಾರ ರಾಮನ್ ಎಂಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ಆ ಬಳಿಕ ಇತರರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.