ಕೊಳವೆ ಬಾವಿ ಮುಚ್ಚುವವರಿಗೆ 500 ರೂ. ಘೋಷಣೆ: ರೈತನಿಂದ ವಿಶೇಷ ಅಭಿಯಾನ - Mahanayaka

ಕೊಳವೆ ಬಾವಿ ಮುಚ್ಚುವವರಿಗೆ 500 ರೂ. ಘೋಷಣೆ: ರೈತನಿಂದ ವಿಶೇಷ ಅಭಿಯಾನ

shivanna
05/04/2024


Provided by

ಕೊಪ್ಪಳ: ವಿಜಯಪುರ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಎರಡು ವರ್ಷದ ಮಗು  ಸಾತ್ವಿಕ್ ಕೊಳವೆ ಬಾವಿಗೆ ಬಿದ್ದು,  NDRF, SDRF, ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಯ ಸತತ ಪ್ರಯತ್ನಗಳ ನಂತರ ಬದುಕಿ ಬಂದಿದ್ದಾನೆ. ಈ ನಡುವೆ ರೈತರೊಬ್ಬರು ಕೊಳವೆ ಬಾವಿ ಮುಚ್ಚುವ ಅಭಿಯಾನಕ್ಕೆ ಕರೆ ನೀಡಿದ್ದಾರೆ.

ಗಂಗಾವತಿಯ ಶಿವಣ್ಣ ಚಳ್ಳಿಕೇರಿ ಎಂಬವರು ಒಂದು ಅಭಿಯಾನ ಆರಂಭಿಸಿದ್ದು, ತೆರೆದ ಕೊಳವೆ ಬಾವಿಗಳನ್ನು ಮುಚ್ಚುವವರಿಗೆ 500 ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

2017, 2018, 2019ರಿಂದಲೂ ಈ ಅಭಿಯಾನವನ್ನು ಶಿವಣ್ಣ ನಡೆಸುತ್ತಿದ್ದಾರೆ. ಇದಕ್ಕಾಗಿ ಸಮುಮಾರು 1 ಲಕ್ಷ ರೂಪಾಯಿಗಳನ್ನು ವಿನಿಯೋಗಿಸಿರುವ ಅವರು,  ಕೊಪ್ಪಳ ಜಿಲ್ಲೆಯಲ್ಲಿದ್ದ ಎಲ್ಲಾ ಕೊಳವೆ ಬಾವಿಗಳನ್ನು ಮುಚ್ಚಿಸಿದ್ದಾರಂತೆ!

ಇದೀಗ ವಿಜಯಪುರದಲ್ಲಿ ಮಗುವೊಂದು ಕೊಳವೆ ಬಾವಿಗೆ ಬಿದ್ದ ಘಟನೆಯ ಬೆನ್ನಲ್ಲೇ ಆ ಜಿಲ್ಲೆಯಲ್ಲೂ ಅಭಿಯಾನಕ್ಕೆ ಮುಂದಾಗಿದ್ದಾರೆ. ಆದ್ರೆ ನನಗೆ ವಯಸ್ಸಾಗಿರೋದ್ರಿಂದ ರಾಜ್ಯ ಸುತ್ತಲು ಸಾಧ್ಯವಾಗುತ್ತಿಲ್ಲ ಹಾಗಾಗಿ, ಕೊಳವೆ ಬಾವಿ ಮುಚ್ಚಿ ನನ್ನನ್ನು ಸಂಪರ್ಕಿಸಿ ಎಂದು ಕರೆ ನೀಡಿರುವ ಅವರು, ನಾನು ನೀಡುತ್ತಿರುವುದು ಬಹುಮಾನವಲ್ಲ, ಇಂತಹ ಘಟನೆ ಸಂಭವಿಸಬಾರದು ಎನ್ನುವ ಜಾಗೃತಿ ಎಂದು ಶಿವಣ್ಣ ಚಳ್ಳಿಕೇರಿ ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ