ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ಮುಖಭಂಗ: 6 ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆ - Mahanayaka

ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ಮುಖಭಂಗ: 6 ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆ

25/12/2020

ಪಾಟ್ನಾ: ಅರುಣಾಚಲ ಪ್ರದೇಶ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಯುನ 7 ಶಾಸಕರ ಪೈಕಿ 6 ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಇದರಿಂದಾಗಿ ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ಭಾರೀ ಮುಖಭಂಗವಾಗಿದೆ.

ಹಯೇಂಗ್ ಮಂಗ್ ಫಿ, ಜೆಕ್ಕೆ ತಕೊ, ಡೊಂಗ್ರು ಸಿಯೊಂಗ್ಜು, ತಲೇಮ್ ತಬೋಹ್, ಕಾಂಗ್ಗಾಂಗ್ ಟಕು ಮತ್ತು ಡೋರ್ಜಿ ವಾಂಗ್ಡಿ ಖರ್ಮಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಶಾಸಕರಾಗಿದ್ದಾರೆ. ಇವರ ಪೈಕಿ ಮೂವರನ್ನು ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಪಕ್ಷದಿಂದ ಅಮಾನತು ಮಾಡಲಾಗಿತ್ತು.

ಇನ್ನೂ ಈ ಸಂಬಂಧ ಹೇಳಿಕೆ ನೀಡಿರುವ ಅರುಣಾಚಲ ರಾಜ್ಯ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿದೆ.  60 ಸದಸ್ಯ ಬಲ ಇರುವ ಅರುಣಾಚಲ ಪ್ರದೇಶದಲ್ಲಿ ಜೆಡಿಯು 7ಸ್ಥಾನಗಳನ್ನು ಗೆದ್ದಿತ್ತು. ಇದೀಗ ತನ್ನ ಮಿತ್ರ ಪಕ್ಷವಾದ ಬಿಜೆಪಿಯೇ ಬೆನ್ನಿಗೆ ಇರಿದಿದೆ. ಇದು ರಾಷ್ಟ್ರ ರಾಜಕಾರಣದಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ಇದು ಬಿಹಾರದಲ್ಲಿ ಪರಿಣಾಮ ಬೀರಬಹುದೇ ಎಂಬ ಬಗ್ಗೆ ವಿಮರ್ಶೆಗಳು ಆರಂಭವಾಗಿದೆ.

ಇತ್ತೀಚಿನ ಸುದ್ದಿ