ತೆರೆದ ಬೋರ್ ವೆಲ್ ಗೆ ಬಿದ್ದ 6 ವರ್ಷದ ಬಾಲಕ: ರಕ್ಷಣಾ ಕಾರ್ಯಾಚರಣೆ ಆರಂಭ - Mahanayaka
12:19 AM Wednesday 22 - October 2025

ತೆರೆದ ಬೋರ್ ವೆಲ್ ಗೆ ಬಿದ್ದ 6 ವರ್ಷದ ಬಾಲಕ: ರಕ್ಷಣಾ ಕಾರ್ಯಾಚರಣೆ ಆರಂಭ

borewell
13/04/2024

ಮಧ್ಯಪ್ರದೇಶ: 6 ವರ್ಷದ ಬಾಲಕನೋರ್ವ ತೆರೆದ ಬೋರ್ ವೆಲ್ ಗೆ ಬಿದ್ದಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.  ಆತನನ್ನು ಬೋರ್ ವೆಲ್ ನಿಂದ ಹೊರ ತೆಗೆಯಲು ಕಾರ್ಯಾಚರಣೆ ಆರಂಭಗೊಂಡಿದೆ.

ರೇವಾ ಜಿಲ್ಲೆಯ ಕೃಷಿ ಭೂಮಿಯೊಂದರಲ್ಲಿ ಈ ಘಟನೆ ನಡೆದಿದೆ. 6 ವರ್ಷದ ಬಾಲಕ ಆಟವಾಡುತ್ತಾ ತೆರೆದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ.  ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದೀಗ ಸ್ಥಳದಲ್ಲಿ ರಕ್ಷಣಾ ತಂಡಗಳು  ಮಗುವನ್ನು ಬೋರ್ ವೆಲ್ ನಿಂದ ಹೊರಗೆ ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಎರಡು ಜೆಸಿಬಿಗಳಲ್ಲಿ ಈಗಾಗಲೇ ಕೆಲಸ ಆರಂಭಗೊಂಡಿದೆ.

ವಾರಣಾಸಿಯ ರಕ್ಷಣಾ ತಂಡ ಸ್ಥಳಕ್ಕೆ ಕೆಲವೇ ಕ್ಷಣಗಳಲ್ಲಿ ಆಗಮಿಸಲಿದ್ದು, ಮಗುವನ್ನು ಕಾಪಾಡಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಕರ್ನಾಟಕದ ವಿಜಯಪುರದಲ್ಲಿ 2 ವರ್ಷದ ಬಾಲಕ ಕೊಳವೆ ಬಾವಿಗೆ ಬಿದ್ದ ಘಟನೆ ನಡೆದಿತ್ತು. ಆತನನ್ನು ಹಗಲು ರಾತ್ರಿ ನಿರಂತರ ಶ್ರಮವಹಿಸಿ ರಕ್ಷಣಾ ತಂಡ ಕಾಪಾಡಿತ್ತು. ಇದೀಗ ಮಧ್ಯಪ್ರದೇಶದಲ್ಲಿ ಕೂಡ ಓರ್ವ ಬಾಲಕ ಕೊಳವೆ ಬಾವಿಯಲ್ಲಿ ಸಿಲುಕಿದ್ದಾನೆ.

ಇತ್ತೀಚಿನ ಸುದ್ದಿ