20 ವರ್ಷದ ಯುವತಿ ಜೊತೆ 60ರ ಅರ್ಚಕ ಚಾಟ್: ಲಕ್ಷ ಲಕ್ಷ ಹಣ ನಾಮ ಹಾಕಿದ ಯುವತಿ!

ಮಂಡ್ಯ: ಯುವತಿಯೊಬ್ಬಳ ಜೊತೆಗೆ ಚಾಟ್ ಮಾಡಿ 60 ವರ್ಷದ ವಯಸ್ಸಿನ ಅರ್ಚಕರೊಬ್ಬರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಪಾಂಡವಪುರ ತಾಲೂಕಿನ ಪಟ್ಟ ಸೋಮನಹಳ್ಳಿ ಗ್ರಾಮದ ವಿಜಯಕುಮಾರ್ ಹಣ ಕಳೆದುಕೊಂಡಿರುವವರು. ವೃತ್ತಿಯಲ್ಲಿ ಅರ್ಚಕನಾಗಿರುವ ವಿಜಯ್ ಕುಮಾರ್ ಗೆ ಫೇಸ್ ಬುಕ್‌ನಲ್ಲಿ 20 ವರ್ಷ ವಯಸ್ಸಿನ ಯುವತಿ ಪರಿಚಯ ಆಗಿದೆ.
ತೆಲಂಗಾಣ ಮೂಲದ ಸಿರಿ ಶ್ರೇಷಾ ಸರಿತಾ ಎಂಬ ಹೆಸರಿನ ಫೇಸ್ ಬುಕ್ ಖಾತೆಯಿಂದ ವಿಜಯ್ ಕುಮಾರ್ ಜೊತೆಗೆ ಚಾಟ್ ಮಾಡಿದ್ದ ಯುವತಿ, ಆತ್ಮೀಯತೆಯಿಂದ ಮಾತನಾಡಿದ್ದಳು. ಹಲವು ಬಾರಿ ನಾನಾ ಕಾರಣಗಳನ್ನು ನೀಡಿ, ಹಣ ಕೇಳಿದ್ದಾಳೆ. ಆಕೆಯ ಮಾತುಗಳನ್ನು ನಂಬಿ ಅರ್ಚಕ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಕಳಿಸಿದ್ದರು.
ಹಲವು ಬಾರಿ ಯುವತಿ ಭೇಟಿಯಾಗುವುದಾಗಿ ತಿಳಿಸಿ ವಂಚಿಸಿದ್ದಳು. ಇದೀಗ ಯುವತಿಯೂ ಸಿಗದೇ, ಕೊಟ್ಟ ಹಣವೂ ಸಿಗದೇ ಕಂಗಾಲಾಗಿರುವ ಅರ್ಚಕ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.
ಫೇಕ್ ಖಾತೆಯಿಂದ ಚಾಟ್ ಮಾಡಿ, ಅರ್ಚಕನಿಂದ ಹಣ ಪಡೆದಿರುವ ಶಂಕೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣ ಸದ್ಯ ವಂಚಕರ ಅಡ್ಡೆಯಾಗುತ್ತಿದೆ. ಸಾರ್ವಜನಿಕರು ಯಾರೊಂದಿಗೆ ಕೂಡ ಬಹಳ ಎಚ್ಚರಿಕೆಯಿಂದ ವ್ಯವಹರಿಸಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth