ಪ್ರವಾದಿ ವಿರುದ್ಧ ದ್ವೇಷ ಭಾಷಣ: ಸ್ವಾಮೀಜಿ ವಿರುದ್ಧ 76 ಎಫ್ಐಆರ್ ದಾಖಲಾದರೂ ಬಂಧನಕ್ಕೆ ಮೀನಾಮೇಷ

ಕಳೆದ ವರ್ಷ ಮಹಾರಾಷ್ಟ್ರದಾದ್ಯಂತ 76 ಎಫ್ಐಆರ್ ಗಳನ್ನು ದಾಖಲಿಸಲು ಕಾರಣವಾದ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಮಹಂತ್ ರಾಮ್ಗಿರಿ ಮಹಾರಾಜ್ ಅವರಿಗೆ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 35 (3) ರ ಅಡಿಯಲ್ಲಿ ಸಿನ್ನಾರ್ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ಬಾಂಬೆ ಹೈಕೋರ್ಟ್ ಗೆ ಹೇಳಿಕೆ ನೀಡಲಾಗಿದೆ. ಆಪಾದಿತ ಅಪರಾಧಗಳಿಗೆ ಶಿಕ್ಷೆಯು ಏಳು ವರ್ಷಗಳನ್ನು ಮೀರುವುದಿಲ್ಲ ಎಂದು ಉಲ್ಲೇಖಿಸಿ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿಲ್ಲ.
ಪ್ರವಾದಿ ಮುಹಮ್ಮದ್ ಅವರನ್ನು ಗುರಿಯಾಗಿಸಿಕೊಂಡು ನೀಡಿದ ವಿವಾದಾತ್ಮಕ ಹೇಳಿಕೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಮಹಾರಾಷ್ಟ್ರದಲ್ಲಿ ಮಹಂತ್ ವಿರುದ್ಧ 76 ಪ್ರಕರಣಗಳನ್ನು ದಾಖಲಿಸಲಾಗಿದೆ.
ವಿಚಾರಣೆಯ ಸಮಯದಲ್ಲಿ, ಅರ್ಜಿದಾರರನ್ನು ಪ್ರತಿನಿಧಿಸಿದ ವಕೀಲ ಇಜಾಜ್ ನಖ್ವಿ, ಪೊಲೀಸರು ಆರೋಪಿಗಳಿಗೆ ಅನಗತ್ಯ ದಯೆ ತೋರಿಸುತ್ತಿದ್ದಾರೆ ಎಂದು ವಾದಿಸಿದ್ದಾರೆ.
ವಿವಾದಾತ್ಮಕ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕಲಾಗಿದೆ ಎಂದು ಪ್ರಾಸಿಕ್ಯೂಟರ್ ಸಲ್ಲಿಕೆಗಳು ಹೇಳಿಕೊಂಡವು. ಆದರೆ ನಖ್ವಿ ಈ ಪ್ರತಿಪಾದನೆಯನ್ನು ಪ್ರಶ್ನಿಸಿದರು. ಈವೀಡಿಯೊಗಳು ಇನ್ನೂ ಆನ್ಲೈನ್ನಲ್ಲಿ ಇವೆ ಎಂದು ಸಮರ್ಥಿಸಿಕೊಂಡರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj