55 ಅಡಿ ಬೋರ್’ವೆಲ್ ಗೆ ಬಿದ್ದಿದ್ದ ಬಾಲಕನ ದಾರುಣ ಸಾವು - Mahanayaka
10:59 AM Thursday 21 - August 2025

55 ಅಡಿ ಬೋರ್’ವೆಲ್ ಗೆ ಬಿದ್ದಿದ್ದ ಬಾಲಕನ ದಾರುಣ ಸಾವು

tanmay sahu
10/12/2022


Provided by

ಭೋಪಾಲ್:  ಬೋರ್ ವೆಲ್ ಗೆ ಬಿದ್ದು 8 ವರ್ಷದ ಬಾಲಕ ಮೃತಪಟ್ಟ ಘಟನೆ ಮಧ್ಯಪ್ರದೇಶದ ಬೇತುಲ್ ನಲ್ಲಿ ನಡೆದಿದ್ದು, ಬೋರ್ ವೆಲ್ ಗೆ ಬಿದ್ದು ಸತತ 65 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಬಾಲಕನನ್ನು ಹೊರತೆಗೆಯಲಾಗಿದ್ದು, ಆದರೆ ಅಷ್ಟರಲ್ಲಾಗಲೇ ಬಾಲಕ ಕೊನೆಯುಸಿರೆಳೆದಿದ್ದ.

ತನ್ಮಯ್ ಸಾಹು ಎಂಬ ಬಾಲಕ ಮೃತಪಟ್ಟ ಬಾಲಕನಾಗಿದ್ದು, ಡಿಸೆಂಬರ್ 6ರಂದು ಜಮೀನಿನಲ್ಲಿ ಆಟವಾಡುತ್ತಿದ್ದ ವೇಳೆ 55 ಅಡಿ ಆಳದ ಬೋರ್ ವೆಲ್ ಗೆ ಬಿದ್ದಿದ್ದ. ಇದನ್ನು ಗಮನಿಸಿದ ಪೋಷಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು, ಒಂದು ಗಂಟೆಯೊಳಗೆ ಸಿಬ್ಬಂದಿಯನ್ನು ಕರೆಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು. ಎಸ್ ಡಿಆರ್ ಎಫ್, ಗೃಹ ರಕ್ಷಕದಳ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿ ನಿರಂತರ 65 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾಲಕನನ್ನು ಬೋರ್ ವೆಲ್ ನಿಂದ ಹೊರ ತೆಗೆದಿದ್ದರು. ಆದರೆ, ಈ ವೇಳೆಗೆ ಬಾಲಕ ಮೃತಪಟ್ಟಿದ್ದ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ