ಮಂಗಳೂರಿನ ಹಾಟ್ ಪ್ರವಾಸಿ ಕೇಂದ್ರ ಈಗ ರೋಗಗಳ ತಾಣ
- ಶಂಶೀರ್ ಬುಡೋಳಿ, ಮಂಗಳೂರು
ಇದು ಮೀನಿನ ನಗರಿಯ ಹಾಟ್ ಪ್ರವಾಸಿ ಕೇಂದ್ರ. ಆದ್ರೆ ಹಾಟ್ ಪ್ಲೇಸ್ ಈಗ ನಾಟಿಯಾಗಿದೆ. ಕೋಟಿ ಕೋಟಿ ಖರ್ಚು ಮಾಡಿದ್ರೂ ನೋ ಯೂಸ್. ಇದ್ಯಾವ ಟೂರಿಸಂ ನ ಅವ್ಯವಸ್ಥೆ? ಮೀನಿನನಗರಿಯ ಹಾಟ್ ಟೂರಿಸಂ ಪ್ಲೇಸ್ ರೋಗಗಳ ತಾಣ. ಈ ಪ್ರದೇಶಕ್ಕೆ ಹೋದ್ರೆ ರೋಗ ಬರೋದ್ರಲ್ಲಿ ನೋ ಡೌಟ್ ಕೋಟಿ ಕೋಟಿ ಖರ್ಚು ಮಾಡಿ ಹೊರಭಾಗ ಸುಂದರಿಕರಣ, ಒಳಗೆ ಟೊಲ್ಲೋ ಟೊಲ್ಲು
ಮಂಗಳೂರು ನಗರ ಸ್ಮಾರ್ಟ್ ಸಿಟಿ ಆಗಿ ಬೆಳೆಯುತ್ತಿದ್ದಂತೆ ಅತ್ತ ಪ್ರಮುಖ ಪ್ರವಾಸಿ ಕೇಂದ್ರಗಳು ಅಭಿವೃದ್ಧಿಪಥ ಕಾಣಬೇಕಿತ್ತು. ಆದರೆ ಮಂಗಳೂರಿನ ಪ್ರಸಿದ್ದ ಪ್ರವಾಸಿ ಕೇಂದ್ರ ಎಂದೇ ಹೆಸರುವಾಸಿಯಾದ ಜಿಂಕೆ ಪಾರ್ಕ್, ಕದ್ರಿ ಉದ್ಯಾನ ವನವು ಇದೀಗ ನಿರ್ವಹಣೆಯ ಕೊರತೆಯಿಂದ ರೋಗಗಳ ಕೇಂದ್ರವಾಗಿ ಮಾರ್ಪಡಾಗುತ್ತಿದೆ.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಸರಿಸುಮಾರು ಎಂಟು ಕೋಟಿಗೂ ಅಧಿಕ ರೂಪಾಯಿ ವ್ಯಯಿಸಿ ಜಿಂಕೆ ಪಾರ್ಕ್ ಅಭಿವೃದ್ಧಿಯಲ್ಲಿ ತುಳುನಾಡಿನ ಸಂಸ್ಕೃತಿ ತೋರಿಸುವ ನೀರಿನ ಕಾರಂಜಿಯನ್ನು ಆಳವಡಿಸಲಾಗಿತ್ತು. ಈ ಕಾರಂಜಿ ಕಳೆದ ಮೂರು ವರ್ಷಗಳಿಂದ ಪ್ರದರ್ಶನ ಇಲ್ಲದೇ ನೆನೆಗುದಿಗೆ ಬಿದ್ದಿದೆ. ಇದ್ರ ಪರಿಕರಗಳು ತುಕ್ಕು ಹಿಡಿಯುತ್ತಿದೆ. ನೀರು ನಿಂತು ಸೊಳ್ಳೆ ಉತ್ಪತಿಯ ಕೇಂದ್ರವಾಗಿ ರೋಗ ಹರಡುವ ಭೀತಿ ಪ್ರವಾಸಿಗರದ್ದು.
ಇನ್ನೂ ಈ ಹಿಂದೆ ಈ ಪಾರ್ಕ್ ನಲ್ಲಿ ಕಾರಂಜಿ ಆಳವಡಿಸಲಾಗಿತ್ತು. ಇದನ್ನು ಈಗಿನ ಸರ್ಕಾರ ನಿರ್ವಹಣೆ ಮಾಡ್ತಾ ಇಲ್ಲ. ಮಾತ್ರವಲ್ಲದೇ ಸ್ಮಾರ್ಟ್ ಸಿಟಿ ಹೆಸರಲ್ಲಿ ರಸ್ತೆಗಳಿಗೆ ಕೋಟಿ ರೂಪಾಯಿ ವ್ಯಯಿಸುತ್ತಿದೆ. ಆದ್ರೆ ಪಾರ್ಕ್ ಅಭಿವೃದ್ಧಿಗೆ ಗಮನ ಹರಿಸಿಲ್ಲ ಅಂತಾರೆ ಮನಪಾ ಸದಸ್ಯ ಎ.ಸಿ.ವಿನಯ್ ರಾಜ್.
ಒಟ್ನಲ್ಲಿ ಮಂಗಳೂರಿನ ಪ್ರಸಿದ್ದ ಪ್ರವಾಸಿ ತಾಣವೊಂದು ನಿರ್ವಹಣೆ ಇಲ್ಲದೇ ರೋಗಗಳ ತಾಣವಾಗ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಜೊತೆಗೆ ಶಾಸಕರು ಗಮನ ಹರಿಸಿ ಈ ಪ್ರವಾಸಿ ತಾಣವನ್ನು ಕಾಪಾಡಬೇಕಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka