60 ಅಡಿ ಆಳದ ಬಾವಿಗೆ ಬಿದ್ದರೂ ಬದುಕಿ ಬಂದ 94 ವರ್ಷದ ವೃದ್ಧೆ!
04/12/2024
ಚಿಕ್ಕಮಗಳೂರು: 60 ಅಡಿ ಬಾವಿಗೆ ಬಿದ್ದರೂ ಅಜ್ಜಿಯೊಬ್ಬರು ಬದುಕುಳಿದ ಘಟನೆ ಕೊಪ್ಪ ತಾಲೂಕಿನ ಮರಕಟ್ಟೆ ಗ್ರಾಮದಲ್ಲಿ ನಡೆದಿದೆ.
ಕಮಲ (94) ವರ್ಷದ ವೃದ್ಧೆ ಕಾಲು ಜಾರಿ 60 ಅಡಿ ಆಳದ ಬಾವಿಗೆ ಬಿದ್ದಿದ್ದರು. ಈ ವೇಳೆ ಬಾವಿಯೊಳಗೆ ಇದ್ದ ಪೈಪ್ ಹಿಡಿದುಕೊಂಡು ನೀರಲ್ಲಿ ಮುಳುಗದೇ ಸುಮಾರು 1 ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿ ಕೊನೆಗೂ ಗೆದ್ದಿದ್ದಾರೆ.
ಬಾವಿಯೊಳಗೆ ಬಿದ್ದಿದ್ದ ವೃದ್ಧೆಯನ್ನು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಹಗ್ಗದ ಸಹಾಯದಿಂದ ವೃದ್ದೆಯನ್ನ ಅಗ್ನಿಶಾಮಕ ಸಿಬ್ಬಂದಿ ವಿಶ್ವನಾಥ ಮೇಲೆತ್ತಿದ್ದಾರೆ. ಅಗ್ನಿ ಶಾಮಕದಳದ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: