ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆ: 15 ಮಂದಿ ನಿರ್ದೇಶಕರ ಆಯ್ಕೆ - Mahanayaka
10:50 AM Thursday 11 - December 2025

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆ: 15 ಮಂದಿ ನಿರ್ದೇಶಕರ ಆಯ್ಕೆ

dk press
28/04/2021

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆಯಿತು.

ಒಟ್ಟು 15 ಸ್ಥಾನಗಳಲ್ಲಿ 9 ಸಾನಗಳಲ್ಲಿ 9 ಸಾಮಾನ್ಯ ಸ್ಥಾನವಿದ್ದು, 12 ಮಂದಿ ಕಣದಲ್ಲಿ ಉಳಿದಿದ್ದರು. ಸಾಮಾನ್ಯ ಸ್ಥಾನದಲ್ಲಿ ಪುಷ್ಪರಾಜ್ ಬಿ.ಎನ್., ಇಬ್ರಾಹಿಂ ಅಡ್ಕಸ್ಥಳ, ಭಾಸ್ಕರ್ ರೈ ಕಟ್ಟ, ಕೇಶವ ಕುಂದರ್, ವಿಲ್ಫ್ರೆಡ್ ಡಿಸೋಜ, ಸುಖ್ಪಾಲ್ ಪೊಳಲಿ,  ಶ್ರೀನಿವಾಸ್ ನಾಯಕ್ ಇಂದಾಜೆ, ಆತ್ಮಭೂಷಣ್, ಆತ್ಮಭೂಷಣ್ ಭಟ್, ಜಿತೇಂದ್ರ ಭಟ್ ಆಯ್ಕೆಯಾಗಿದ್ದಾರೆ.

ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಕ್ಷೇತ್ರದಿಂದ 2 ಸ್ಥಾನಕ್ಕೆ ಒಟ್ಟು 7 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರಲ್ಲಿ ಮುಹಮ್ಮದ್ ಆರೀಫ್, ವಿಜಯ್ ಕೋಟ್ಯಾನ್ ಪಡು ಆಯ್ಕೆಯಾಗಿದ್ದಾರೆ.  ಇನ್ನೂ ನಾಲ್ವರು ಅವಿರೋಧ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸ್ಥಾನದಲ್ಲಿ ಸುರೇಶ್ ಡಿ.ಪಳ್ಳಿ ಹಾಗೂ ಹರೀಶ್ ಮೋಟುಕಾನ, ಮಹಿಳಾ ಕ್ಷೇತ್ರದಲ್ಲಿ ಸತ್ಯಾವತಿ ಕೆ. ಮತ್ತು ಶಿಲ್ಪಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 209 ಶೇರುದಾರರ ಪೈಕಿ 198 ಮಂದಿ ಮತದಾನ ಮಾಡಿದ್ದು ಶೇ.94.73 ಮತದಾನವಾಗಿತ್ತು. ಸಹಕಾರಿ ಇಲಾಖೆಯ ಹಿರಿಯ ನಿರೀಕ್ಷಕ ಶಿವಲಿಂಗಯ್ಯ ಎಂ. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ವಾರ್ತಾ ಇಲಾಖೆ ಸಿಬ್ಬಂದ ಸಹಕಾರ ನೀಡಿದರು.

ಇತ್ತೀಚಿನ ಸುದ್ದಿ